ಆಂಧ್ರಪ್ರದೇಶ : ಕೆಲವೊಮ್ಮೆ ಕೆಲವು ಘಟನೆಗಳನ್ನು ನೋಡಿದಾಗ ಹೋಟೆಲ್ ಗಳಲ್ಲಿ ಅಥವಾ ಹೊರಗೆ ತಿನ್ನುವ ಪದಾರ್ಥಗಳು ಎಷ್ಟು ಸೇಫ್ ಅಂಥ ಅನ್ನಿಸಿಬಿಡುತ್ತೆ. ಊಟದಲ್ಲಿ ಹುಳ, ಜಿರಳೆ ಇತ್ಯಾದಿ ಸಿಕ್ಕಿರುವ ಘಟನೆಗಳನ್ನ ನೀವು ಈಗಾಗಲೇ ನೋಡಿರ್ತೀರಾ. ಅಂಥದ್ದೇ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದೆ.
Cigarette 🚬 Butts in #Bawarchi biryani …
Nerchukoni intlo chesukovatam uttamam pic.twitter.com/j2ct9mxn2Q
— Vineeth K (@DealsDhamaka) November 25, 2024
ಹೈದರಾಬಾದ್‌ನ ಬಾವರ್ಚಿ ರೆಸ್ಟೋರೆಂಟ್‌ನಲ್ಲಿ ಗ್ರಾಹಕರೊಬ್ಬರು ಚಿಕನ್ ಬಿರಿಯಾನಿಯಲ್ಲಿ ಸಿಗರೇಟ್ ತುಂಡು ಕಂಡು ಅವಾಕ್ಕಾಗಿದ್ದಾರೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣರಾಗಿದೆ.
ಈ ಬಗ್ಗೆ ರೆಸ್ಟೋರೆಂಟ್ ನ ಸಿಬ್ಬಂದಿಯನ್ನುಗ್ರಾಹಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ನಂತರ ರೆಸ್ಟೋರೆಂಟ್ ಆಡಳಿತ ಮಂಡಳಿ ಗ್ರಾಹಕರ ಬಳಿ ಕ್ಷಮೆಯಾಚಿಸಿದೆ. ಆದ್ರೆ ಈ ಘಟನೆಯಿಂದ, ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಕಾಪಾಡಿಕೊಳ್ಳುವ ನೈರ್ಮಲ್ಯದ ಆತಂಕ ಹೆಚ್ಚಾಗಿದೆ.