ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವರಿಗೆ ಮೆಂಟಲ್ ಬ್ಯಾಲೆನ್ಸ್ ತಪ್ಪಿದೆ. ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ರು.
ನೆನ್ನೆ ವಿಜಯಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ್ದ ಸಿ.ಟಿ.ರವಿ ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಡಿ.ಕೆಶಿ ಬ್ರದರ್ ಕುಕ್ಕರ್ ನಲ್ಲಿ ಬಾಂಬ್ ಇಟ್ಟಿದ್ದರು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು, ಇದೀಗ ಅವರ ವಿರುದ್ಧ ಕಾನೂನು ಹೋರಾಟ ಮಾಡಲು ಯೋಚಿಸುತ್ತೇನೆ ಎಂದ್ರು.
ಸಿಟಿ ರವಿಗೆ ಸೋಲಿನ ಭಯ.. ಪಾಪ ಅವರಿಗೆ ಮೆಂಟಲ್ ಪ್ರಾಬ್ಲಂ ಇದೆ. ನಾನು ಕೇಸ್ ಹಾಕೋ ಮುಂಚೆ ಅವರಿಗೆ ಚಿಕಿತ್ಸೆ ಅಗತ್ಯ ಇದೆ. ಅದಕ್ಕೆ ನಾವು ನೀವು ಎಲ್ಲಾ ಸೇರಿ ಸಹಾಯ ಮಾಡೋಣ ಎಂದು ಡಿ.ಕೆ ಶಿವಕುಮಾರ್ ಹೇಳಿದ್ರು
ಸಿ.ಟಿ ರವಿ ಹೇಳಿದ್ದೇನು?
ನೆನ್ನೆ ನಡೆದ ದಾವಣಗೆರೆಯ ಮಹಾಸಂಗಮ ಸಮಾವೇಶದಲ್ಲಿ ಸಿ.ಟಿ.ರವಿ ಮಾತನಾಡುತ್ತಾ ಕಾಂಗ್ರೆಸ್ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ್ದರು. ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಕುಕ್ಕರ್ ನಲ್ಲಿ ಬಾಂಬ್ ಇಡುವ ಕೆಲಸವನ್ನು ಡಿಕೆ ಬ್ರದರ್ಸ್ ಮಾಡಿದ್ದರು. ಆಮೇಲೆ ಅವರನ್ನು ಕೆಪಿಸಿಸಿ ಅಧ್ಯಕ್ಷರು ನಮ್ಮ ಬ್ರದರ್ಸ್ ಎಂದು ಕರೆದಿದ್ದರು ಎಂದು ಭಾಷಣದ ವೇಳೆ ಮಾತನಾಡಿದ್ದರು