Wednesday, February 19, 2025
Homeಟಾಪ್ ನ್ಯೂಸ್ಗುಲಾಮರಾಗೋದಕ್ಕಿಂತ ಉರಿಗೌಡ ಎನಿಸಿಕೊಳ್ಳೊದೇ ಲೇಸು: ಸಿಟಿ ರವಿ

ಗುಲಾಮರಾಗೋದಕ್ಕಿಂತ ಉರಿಗೌಡ ಎನಿಸಿಕೊಳ್ಳೊದೇ ಲೇಸು: ಸಿಟಿ ರವಿ

ಚುನಾವಣೆ ಮುಗಿಯುವವರೆಗೂ ಉರಿಗೌಡ ನಂಜೇಗೌಡ ವಿಚಾರ ಅಂತ್ಯವಾಗೋ ರೀತಿ ಕಾಣ್ತಿಲ್ಲ. ಬಿಜೆಪಿ ಮುಖಂಡ ಸಿಟಿ ರವಿ ಮತ್ತೆ ಉರಿಗೌಡನ ವಿಚಾರವೆತ್ತಿದ್ದಾರೆ. ಗುಲಾಮಿ ಮನಸ್ಥಿತಿಯಲ್ಲಿ ಬದುಕುವುದಕ್ಕಿಂತ ಉರಿಗೌಡ- ನಂಜೇಗೌಡ ಎಂದು ಕರೆಸಿಕೊಲ್ಳುವುದೇ ವಾಸಿ ಎಂದಿದ್ದಾರೆ ಸಿಟಿ ರವಿ.

ಉರಿಗೌಡ- ನಂಜೇಗೌಡ ಎಂಬುವವರು ಯಾರೂ ಇಲ್ಲ.. ಇವೆಲ್ಲಾ ಬರೀ ಕಾಲ್ಪನಿಕ ಪಾತ್ರಗಳಷ್ಟೇ. ಉರಿ- ನಂಜೇಗೌಡ ಮತ್ಯಾರೂ ಅಲ್ಲ.. ಅದು ಸಿಟಿ ರವಿ ಹಾಗೂ ಅಶ್ವತ್ಥನಾರಾಯಣ್‌ರವರೇ ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ರು. ಇದಕ್ಕೆ ತಿರುಗೇಟು ನೀಡಿದ ಸಿ.ಟಿ ರವಿ, ಚಿಕ್ಕಮಗಳೂರಿನಲ್ಲಿ ಮಾತನಾಡುತ್ತಾ, ನಾನು ಟಿಪ್ಪು ಕಾಲದಲ್ಲಿ ಬದುಕಿದ್ರೆ ಉರಿಗೌಡನಂತೆಯೇ ಹೋರಾಟ ಮಾಡುತ್ತಿದ್ದೆ . ಬೇರೆಯವರಿಗೆ ಗುಲಾಮರಾಗಿ ಬದುಕುವುದಕ್ಕಿಂತ ಉರಿಗೌಡ- ನಂಜೇಗೌಡ ಎಂದು ಕರೆಯಿಸಿಕೊಳ್ಳೋದು ಎಷ್ಟೋ ಉತ್ತಮ ಎಂದ್ರು.

ಹೆಚ್ಚಿನ ಸುದ್ದಿ

error: Content is protected !!