Thursday, April 16, 2026
Homeಕ್ರೈಂCRIME : ಬಾರ್‌ನಲ್ಲಿ ಕುಳಿತು ಗುರಾಯಿಸಿದಕ್ಕೆ ಗಲಾಟೆ -  ರಸ್ತೆಯಲ್ಲೇ ಕೈಕೈ ಮಿಲಾಯಿಸಿದ ಕಿರಾತಕರು!- VIDEO

CRIME : ಬಾರ್‌ನಲ್ಲಿ ಕುಳಿತು ಗುರಾಯಿಸಿದಕ್ಕೆ ಗಲಾಟೆ –  ರಸ್ತೆಯಲ್ಲೇ ಕೈಕೈ ಮಿಲಾಯಿಸಿದ ಕಿರಾತಕರು!- VIDEO

ನೆಲಮಂಗಲ: ಮದ್ಯದ ಅಮಲಿನಲ್ಲಿ (Drunk man) ಸಣ್ಣ ವಿಷಯಕ್ಕೆ ಶುರುವಾದ ಕಿರಿಕ್ (Fighting), ರಸ್ತೆಯಲ್ಲೇ ಎರಡು ಗುಂಪುಗಳ ನಡುವೆ ಬಡಿದಾಟಕ್ಕೆ (Crime) ಕಾರಣವಾದ ಘಟನೆ ನೆಲಮಂಗಲ (Nelamangala) ಸಮೀಪದ ಬಾಗಲಗುಂಟೆಯ ಜೈಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನಡೆದಿದೆ.

ಬಾಗಲಗುಂಟೆಯ ಬಾರ್‌ನಲ್ಲಿ ಬಲರಾಮ ಮತ್ತು ಯತೀಶ್ ಎಂಬುವವರ ಎರಡು ಗುಂಪುಗಳು ಕುಳಿತು ಮದ್ಯಪಾನ ಮಾಡುತ್ತಿದ್ದವು. ಈ ವೇಳೆ ಒಬ್ಬರನ್ನೊಬ್ಬರು ಗುರಾಯಿಸಿದ ವಿಷಯಕ್ಕೆ  ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ. 

ಮೊದಲು ಬಾರ್‌ನ ಒಳಗೆ ಆರಂಭವಾದ ಈ ಕಿತ್ತಾಟ, ನಂತರ ಹೊರಗೆ ಬಂದು ಮತ್ತೆ ಹೊಡೆದಾಟ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಎರಡೂ ಗುಂಪಿನ ಯುವಕರು  ರಸ್ತೆಯಲ್ಲೇ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. 

ಇವರ ಗಲಾಟೆಯಿಂದಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಮತ್ತು ವಾಹನ ಸವಾರರು ಗಾಬರಿಗೊಂಡಿದ್ದಾರೆ. ಯುವಕರ ಈ ವಿಕೃತ ವರ್ತನೆಯಿಂದಾಗಿ ಬಡಾವಣೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.


ಗಲಾಟೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಪೊಲೀಸರ ವಾಹನ ಬರುವುದನ್ನು ಗಮನಿಸಿದ ಪುಂಡರು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದು, ಬಾರ್ ಅಂಡ್ ರೆಸ್ಟೋರೆಂಟ್ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಇಂತಹ ಪುಂಡಾಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!