ಮಧ್ಯಪ್ರದೇಶ: ಮದುವೆಗೆ ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಬಾಲಕಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ಪೋಷಕರಿಗೇ ವಿಷ ಉಣಿಸಿ ಕೊಲ್ಲಲು (Crime) ಯತ್ನಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ಬೆಳಕಿಗೆ ಬಂದಿದೆ.
ಪ್ರಿಯಕರನ ಜೊತೆ ಸೇರಿ ಸಂಚು
ಪ್ರಿಯಕರ ಸುದಾಮ ಎಂಬಾತನ ಜೊತೆ ಸೇರಿ ಸಂಚು ರೂಪಿಸಿದ್ದ ಬಾಲಕಿ, ಪೋಷಕರು ತಿನ್ನುವ ರೊಟ್ಟಿಯಲ್ಲಿ ಇಲಿ ಪಾಷಾಣ ಬೆರೆಸಿದ್ದಾಳೆ. ಸದ್ಯ ವಿಷಪೂರಿತ ಆಹಾರ ಸೇವಿಸಿದ ತಾಯಿ ಮಿಥಿಲೇಶ್ ಮತ್ತು ತಂದೆ ಗಬ್ಬರ್ ಪ್ರಜಾಪತಿ ಅವರ ಸ್ಥಿತಿ ಗಂಭೀರವಾಗಿದ್ದು, ಗ್ವಾಲಿಯರ್‌ನ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಈ ಭೀಕರ ಘಟನೆಯ ಬೆನ್ನತ್ತಿದ ಪೊಲೀಸರಿಗೆ ಬಾಲಕಿ ಮತ್ತು ಆಕೆಯ ಪ್ರಿಯಕರನ ನಡುವೆ ನಡೆದ ಆಡಿಯೋ ಸಂಭಾಷಣೆ ಲಭ್ಯವಾಗಿದ್ದು, ಅದರಲ್ಲಿ ಕೊಲೆಗೆ ನಡೆಸಿದ ಸಂಚು ಬಯಲಾಗಿದೆ. “ಹತ್ತಿರದ ಅಂಗಡಿಯಿಂದ ಇಲಿ ಪಾಷಾಣ ತಂದುಕೊಡು, ಇಂದು ನಾನೇ ರೊಟ್ಟಿ ಮಾಡುತ್ತಿದ್ದೇನೆ, ವಿಷ ಬೆರೆಸಲು ಇದು ಸರಿಯಾದ ಸಮಯ” ಎಂದು ಬಾಲಕಿ ಪ್ರಿಯಕರನಿಗೆ ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ಈ ಆಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಮಗಳ ಕೃತ್ಯ ಕಂಡು ಜನತೆ ಬೆಚ್ಚಿಬಿದ್ದಿದ್ದಾರೆ.
ಪೋಷಕರ ಆರೋಗ್ಯ ಹದಗೆಡುತ್ತಿದ್ದಂತೆ ಮೊದಲು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಪರಿಸ್ಥಿತಿ ವಿಷಮಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ಗೆ ಸ್ಥಳಾಂತರಿಸಲಾಗಿದೆ. ಚೇತರಿಸಿಕೊಂಡ ನಂತರ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಬಾಲಕಿ ಮತ್ತು ಆಕೆಯ ಪ್ರಿಯಕರ ಸುದಾಮ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರೀತಿಗಾಗಿ ಹೆತ್ತವರನ್ನೇ ಬಲಿಪಡೆಯಲು ಮುಂದಾದ ಈ ಘಟನೆ ಮೊರೆನಾ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಹಿರಿಯ ವಿವಾಹಿತೆಯೊಂದಿಗೆ ಪ್ರೇಮ ಸಂಬಂಧ – ಬ್ಲಾಕ್‌ಮೇಲ್ ಗೆ ಹೆದರಿ ಬಾಡಿಬಿಲ್ಡರ್ ಸೂ*ಸೈಡ್!
ಬೆಂಗಳೂರಿನ ನೆಲಮಂಗಲದಲ್ಲಿ (Nelamangala) ಆಂಟಿ ಜತೆ ಲವ್ (Love )ನಲ್ಲಿ ಬಿದ್ದ ಜಿಮ್ ಟ್ರೈನರ್ ಸೂಸೈಡ್ (Self Harming ) ಮಾಡಿಕೊಂಡಿದ್ದಾನೆ.
ನೆಲಮಂಗಲದ ವಾಜರಹಳ್ಳಿಯಲ್ಲಿ ಘಟನೆ ನಡೆದಿದ್ದು,ದಿಲೀಪ್ (28) ಮೃತ ಯುವಕನಾಗಿದ್ದಾನೆ.ಈತ ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದರು.
ಜಿಮ್‌ನಲ್ಲಿ ದಿಲೀಪ್‌ಗೆ 42 ವರ್ಷದ ವಿವಾಹಿತ ಮಹಿಳೆಯ ಪರಿಚಯವಾಗಿತ್ತು. ಆಕೆಗೆ ಮದುವೆಯಾಗಿದ್ರೂ ದಿಲೀಪ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು ಎಂಬ ಆರೋಪಗಳು ಕೇಳಿ ಬಂದಿವೆ.
ದಿಲೀಪ್ ಜೊತೆಗೆ ಸಂಬಂಧದಲ್ಲಿದ್ದಳು ಎನ್ನಲಾದ ವಿವಾಹಿತ ಮಹಿಳೆ ಇನ್‌ಸ್ಟಾಗ್ರಾಮ್ ಮೂಲಕ ದಿಲೀಪ್ ಸಹೋದರನಿಗೆ ಮೆಸೇಜ್ ಮಾಡಿದ್ದಾಳೆ. ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಕೆ ತಿಳಿಸಿದ್ದಾಳೆ. ದಿಲೀಪ್ ಸಹೋದರ ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. .
ನೆಲಮಂಗಲ ಟೌನ್ ಪೊಲೀಸರ ಟೀಂ ಭೇಟಿ ನೀಡಿ ಪರಿಶೀಲಿಸಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಪ್ರೇಮಪ್ರಕರಣ ಬಯಲಾಗಿ ಮುರಿದುಬಿದ್ದ ಮದುವೆ – ಯುವತಿ ಆತ್ಮಹ*ತ್ಯೆ!