ಬೆಂಗಳೂರು : ರಾಜ್ಯದಲ್ಲಿ (Karnataka ) ಸಿಲಿಂಡರ್ (Cylinder )ಅಭಾವ ಸೃಷ್ಟಿಯಾಗಿದ್ದು, ಹೋಟೆಲ್ ಗಳು ಹಾಗೂ ಫಾಸ್ಟ್ ಫುಡ್ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ಈ ನಡುವೆ ಸಿಲಿಂಡರ್ ಕಳ್ಳರ ಹಾವಳಿ ಕೂಡ ಹೆಚ್ಚಾಗಿದೆ.
ಸಿಲಿಂಡರ್ ಸಮಸ್ಯೆ ಬೆನ್ನಲ್ಲೇ ತುಂಬಿದ ಸಿಲಿಂಡರ್ ಕಳ್ಳತನ ನಡೆದಿದೆ.ಬೆಂಗಳೂರಿನ ನಾಗರಬಾವಿಯ ಕಲ್ಯಾಣ ನಗರದಲ್ಲಿ ಈ ಒಂದು ಕಳ್ಳತನ ನಡೆದಿದೆ.
ಕಲ್ಯಾಣ ನಗರದಲ್ಲಿ ಬೈಕಿನಲ್ಲಿ ಬಂದು ಮನೆಯ ಕಾಂಪೌಂಡ್ ನಲ್ಲಿದ್ದಂತ ಚೀಲದ ಸಮೇತ ಸಿಲಿಂಡರ್ ಕಳ್ಳತನ ನಡೆದಿದೆ. ಮನೆಯವರು ಸಿಲಿಂಡರ್ ಫುಲ್ ಮಾಡಿ ಚೀಲದಲ್ಲಿ ಇಟ್ಟಿದ್ದರು. ಇದನ್ನು ಮೊದಲೇ ಗಮನಿಸಿದ್ದ ಕಳ್ಳ ರಾತ್ರಿ ಬೈಕ್ ನಲ್ಲಿ ಬಂದು ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿದ್ದಾನೆ.
ಸಿಲಿಂಡರ್ ಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಕಳ್ಳತನ ಕೇಸ್ ಹೆಚ್ಚಾಗ್ತಿದೆ. ಪೊಲೀಸರು ಇತ್ತ ಗಮನ ಹರಿಸಿ ಕ್ರಮಕೈಗೊಳ್ಳಬೇಕಿದೆ. ಸದ್ಯ ಸಿಸಿ ಟಿವಿ ಹಾಗೂ ಗಾಡಿ ನಂಬರ್ ಆಧರಿಸಿ ಕಳ್ಳರ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಸತತ ದಾಳಿಯ ಬಳಿಕವೂ ಇರಾನ್ ಸರ್ಕಾರ ಕುಸಿಯುವ ಸಾಧ್ಯತೆಯಿಲ್ಲ – ಅಮೆರಿಕ ಗುಪ್ತಚರ ವರದಿ