Wednesday, August 19, 2026
Homeಕ್ರೈಂCRIME : ಮೊಬೈಲ್ ಚಾರ್ಜ್ ನೆಪದಲ್ಲಿ ಜೆಪ್ಟೋ ಡೆಲಿವರಿ ಬಾಯ್ IT ಉದ್ಯೋಗಿ ಮೇಲೆ ಅತ್ಯಾಚಾರಕ್ಕೆ...

CRIME : ಮೊಬೈಲ್ ಚಾರ್ಜ್ ನೆಪದಲ್ಲಿ ಜೆಪ್ಟೋ ಡೆಲಿವರಿ ಬಾಯ್ IT ಉದ್ಯೋಗಿ ಮೇಲೆ ಅತ್ಯಾಚಾರಕ್ಕೆ ಯತ್ನ!

ಚೆನ್ನೈ : ಐಟಿ ಉದ್ಯೋಗಿ ಮೇಲೆ ಜೆಪ್ಟೋ ಡೆಲಿವರಿ ಬಾಯ್​ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನಲ್ಲಿ ವಾಸಿಸುತ್ತಿರೋ ಮಡಿಪ್ಪಕ್ಕಂನ ಐಟಿ ಉದ್ಯೋಗಿ ಜೆಪ್ಟೋ ಆ್ಯಪ್​ನಲ್ಲಿ ಒಂದು ಆರ್ಡರ್ ಮಾಡಿದ್ದರು. ಗೋಪಿನಾಥ್ ಎಂಬ ಡೆಲಿವರಿ ಬಾಯ್, ಮಹಿಳೆ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವರಿ ಮಾಡಿದ್ದ. ಆಗಲೇ ಗೋಪಿನಾಥ್ ಹೊಸ ಆಟ ಶುರು ಮಾಡಿದ್ದಾನೆ.

ಮ್ಯಾಡಮ್ ಮೊಬೈಲ್ ಚಾರ್ಜ್ ಹಾಕ್ತೀರಾ?
ಡೆಲಿವರಿ ಬಾಯ್ ಗೋಪಿನಾಥ್, ತನ್ನ ಮೊಬೈಲ್​ನ್ನು ಸ್ವಲ್ಪ ಹೊತ್ತು ತನ್ನ ಚಾರ್ಜ್ ಮಾಡುವಂತೆ ಕೇಳಿದ್ದ. ಪಾಪ ಅಂತ ಸಾಫ್ಟ್‌ವೇರ್ ಉದ್ಯೋಗಿಯಾಗಿರೋ ಮಹಿಳೆ ಕೂಡಾ ಆತನನ್ನು ಮನೆಗೆ ಒಳಗೆ ಬಿಟ್ಟುಕೊಂಡಿದ್ದಳು. ಮನೆಯಲ್ಲಿ ಯಾರೂ ಇಲ್ಲ ಅನ್ನೋದನ್ನು ಗಮನಿಸಿದಗೋಪಿನಾಥ್ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಕಿರುಚಿಕೊಂಡ ನಂತರ ಡೆಲಿವರಿ ಬಾಯ್ ಮನೆಯಿಂದ ಪರಾರಿಯಾಗಿದ್ದಾನೆ.
ಅತ್ಯಾಚಾರ ಯತ್ನದ ಬೆನ್ನಲ್ಲೇ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾಳೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ಡೆಲಿವರಿ ಬಾಯ್ ಗೋಪಿನಾಥ್​ನನ್ನು ಬಂಧಿಸಿದ್ದಾರೆ. ಈ ಹಿಂದೆಯೂ ಈ ರೀತಿಯ ಕೃತ್ಯ ಎಸಗಿದ್ದಾನಾ ಅಂತ ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!