Wednesday, August 19, 2026
Homeಕ್ರೈಂCRIME: ಫೋಟೋ ವೈರಲ್ ಬೆದರಿಕೆಗೆ ಬಲಿಯಾಯ್ತಾ ಜೀವ? ವೀಡಿಯೋ ಮಾಡಿ ಯುವತಿ ಆತ್ಮಹತ್ಯೆ!

CRIME: ಫೋಟೋ ವೈರಲ್ ಬೆದರಿಕೆಗೆ ಬಲಿಯಾಯ್ತಾ ಜೀವ? ವೀಡಿಯೋ ಮಾಡಿ ಯುವತಿ ಆತ್ಮಹತ್ಯೆ!

ಬಳ್ಳಾರಿ: ಹಳೆ ಪ್ರೇಮಿಯ ಬ್ಲ್ಯಾಕ್‌ಮೇಲ್ (Blackmail) ಹಾಗೂ ಕಿರುಕುಳಕ್ಕೆ ಮನನೊಂದ  ಯುವತಿಯೊಬ್ಬಳು ವೀಡಿಯೊ ಹಂಚಿಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿರುವ (Crime) ಅತ್ಯಂತ ದಾರುಣ (Ballari) ಘಟನೆ ನಗರದ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿ, ಜೀವ ತ್ಯಜಿಸುವ ಮುನ್ನ ತನ್ನ ಹೊಸ ಪ್ರೇಮಿಗೆ ಕರೆ ಮಾಡಿ ಆತಂಕದ ವಿವರ ಹಂಚಿಕೊಂಡಿದ್ದು, ಬಳಿಕ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.

ಏನಿದು ಪ್ರಕರಣ?

ಮೃತ ಯುವತಿಯನ್ನ ಬಳ್ಳಾರಿಯ ಕೌಲ್​ಬಜಾರ್ ಮೂಲದ ಫೀರ್ದೋಸ್ ಎಂದು ಗುರುತಿಸಲಾಗಿದೆ.  ಆರಂಭದಲ್ಲಿ ಕೌಲ್ ಬಜಾರ್ ನಿವಾಸಿ ಅಜೀಂ ಎಂಬಾತನನ್ನು ಪ್ರೀತಿಸುತ್ತಿದ್ದ ಯುವತಿ, ಆತನ ನಡವಳಿಕೆಯಿಂದ ಬೇಸತ್ತು ಆ ಸಂಬಂಧದಿಂದ ದೂರವಾಗಿದ್ದಳು. ನಂತರ ಅಜೀಂನ ಸ್ನೇಹಿತ ಸೋಹೈಲ್ ಎಂಬಾತನೊಂದಿಗೆ ಮದುವೆಯಾಗಲು ನಿರ್ಧರಿಸಿದ್ದಳು. ಆದರೆ, ಈ ವಿಷಯ ತಿಳಿದ ಹಳೆ ಪ್ರೇಮಿ ಅಜೀಂಗೆ ಬಹಳ ಕೋಪ ಬಂದಿದೆ. ತನ್ನನ್ನ ಬಿಟ್ಟು ಹೋಗಿದ್ದಾಳೆ ಎನ್ನುವ ಕಾರಣಕ್ಕೆ ತನ್ನ ಬಳಿಯಿರುವ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದ. ಈ ಬ್ಲ್ಯಾಕ್‌ಮೇಲ್‌ನಿಂದ ತೀವ್ರ ಮಾನಸಿಕ ಹಿಂಸೆಗೆ ಒಳಗಾದ ಯುವತಿ, ಆತ್ಮಹತ್ಯೆಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ವೀಡಿಯೊದಲ್ಲಿ ಮನವಿ ಮಾಡಿ ಪ್ರಾಣ ಕಳೆದುಕೊಂಡಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಮೃತರ ಪೋಷಕರು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರೀತಿಯ ನೆಪದಲ್ಲಿ ಮಗಳನ್ನು ದುರುಪಯೋಗಪಡಿಸಿಕೊಂಡು, ಇಬ್ಬರೂ ಪ್ರೇಮಿಗಳು ನೀಡಿದ ತೀವ್ರ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ದೃಶ್ಯ ಸಿನಿಮಾ ಶೈಲಿಯ ಭೀಕರ ಕೊಲೆ ಪ್ರಕರಣ: 4 ವರ್ಷಗಳ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ತುಮಕೂರು: ಖ್ಯಾತ ‘ದೃಶ್ಯ’ ಸಿನಿಮಾವನ್ನು (Drishyam Film) ನೆನಪಿಸುವಂತೆ ಪತಿಯನ್ನೇ ಕೊಂದು, ಹೊಸ ಮನೆಯ ಅಡಿಪಾಯದಲ್ಲಿ ಶವ ಹೂತುಹಾಕಿ ಸಾಕ್ಷ್ಯ (Crime) ನಾಶಪಡಿಸಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು (Tumkur) ನ್ಯಾಯಾಲಯವು ಪ್ರಮುಖ ಆರೋಪಿಗೆ ಜೀವಾವಧಿ (Punishment) ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಏನಿದು ಪ್ರಕರಣ?
2022ರ ಯುಗಾದಿ ಹಬ್ಬದ ದಿನದಂದು ಶಿರಾ ತಾಲೂಕಿನ ಕಮಲನಾಯ್ಕನ ತಾಂಡದಲ್ಲಿ ಈ ಭೀಕರ ಕೃತ್ಯ ನಡೆದಿತ್ತು. ಗಂಡ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ರವಿಚಂದ್ರನಾಯ್ಕ ಎಂಬುವವರನ್ನು ಆತನ ಪತ್ನಿ ಸಾವಿತ್ರಿಬಾಯಿ ಹಾಗೂ ಆಕೆಯ ಪ್ರಿಯಕರ ರಾಜಾನಾಯ್ಕ ಸೇರಿ ಕೊಲೆ ಮಾಡಿದ್ದರು.

ಇಷ್ಟಕ್ಕೆ ಸುಮ್ಮನಾಗದ ಪಾಪಿಗಳು ಕೊಲೆಯ ನಂತರ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ನಿರ್ಮಾಣ ಹಂತದಲ್ಲಿದ್ದ ಹೊಸ ಮನೆಯ ಪಾಯದ ಅಡಿಯಲ್ಲಿ ಹೂತು ಹಾಕಿದ್ದರು. ತಾವು ಮಾಡಿರುವ ಕೊಲೆ ಪ್ರಕರಣದ ಸುಳಿವು ಸಿಗದಂತೆ ಅದರ ಮೇಲೆ ಸುಮಾರು 30 ರಿಂದ 40 ಲೋಡ್‌ಗಳಷ್ಟು ಮಣ್ಣು ಹಾಕಿ ಸಹ ಮುಚ್ಚಲಾಗಿತ್ತು. ಸುಮಾರು ಒಂದೂವರೆ ತಿಂಗಳ ಕಾಲ ಪತಿ ಎಲ್ಲಿದ್ದಾನೆ ಎಂದು ಸಂಬಂಧಿಕರು ಕೇಳಿದಾಗ ಪತ್ನಿ ಸಾವಿತ್ರಿ ಬಾಯಿ ಎಲ್ಲರ ಬಳಿ ಸುಳ್ಳು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಆದರೆ ಆಸ್ತಿ ವಿಚಾರವಾಗಿ ಸಹಿ ಹಾಕಲು ಸಂಬಂಧಿಕರು ಒತ್ತಾಯ ಮಾಡಿದಾಗ, ಆಕೆ ಭಯಗೊಂಡು ತಾನು ಮಾಡಿರುವ ಕೊಲೆಯ ರಹಸ್ಯವನ್ನು ಸಂಬಂಧಿಕರ ಬಳಿ ಬಿಚ್ಚಿಟ್ಟಿದ್ದಳು. ತಕ್ಷಣವೇ ಸಂಬಂಧಿಕರು ಪೊಲೀಸರಿಗೆ ಈ ವಿಚಾರವಾಗಿ ದೂರು ನೀಡಿದ್ದರು.

ಇದನ್ನೂ ಓದಿ : ಮಂಡ್ಯ ಅಪಘಾತ ಕೇಸ್ ಗೆ ಬಿಗ್ ಟ್ವಿಸ್ಟ್ – ಅತ್ಯಾ*ಚಾರ ಯತ್ನದ ಬಳಿಕ ಕೊ*ಲೆ ಆರೋಪ, ಮೂವರು ಅರೆಸ್ಟ್!

ಹೆಚ್ಚಿನ ಸುದ್ದಿ

Change Language »
error: Content is protected !!