ಹರಿಯಾಣ : ಇತ್ತೀಚೆಗೆ ಅಕ್ರಮ ಸಂಬಂಧಗಳಿಂದ ಮನನೊಂದ ಪುರುಷರು ರಾಕ್ಷಸರ ರೀತಿ ವರ್ತಿಸ್ತಿದ್ದಾರೆ. ಈ ಮಾತಿಗೆ ಉದಾಹರಣೆ ಎಂಬಂತೆ ಹರಿಯಾಣದಲ್ಲಿ ಘಟನೆಯೊಂದು ನಡೆದಿದ್ದು, ಇಡೀ ದೇಶವೇ ಬೆಚ್ಚಿಬಿದ್ದಿದೆ.
ತನ್ನ ಪತ್ನಿಯೊಂದಿಗೆ ಅಕ್ರಮ
ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು ಸಂತ್ರಸ್ತ ಪತಿ ಜೀವಂತವಾಗಿ ಸಮಾಧಿ ಮಾಡಿದ ಘಟನೆ ಹರಿಯಾಣದ ಚರ್ಕಿ ದಾದ್ರಿ ಯಲ್ಲಿ ನಡೆದಿದೆ.
ಜಗದೀಪ್ ಎಂಬ ವ್ಯಕ್ತಿ ಖಾಸಗಿ ವಿವಿಯೊಂದರಲ್ಲಿ ಯೋಗ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಯೋಗ ಶಿಕ್ಷಕ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಖಚಿತವಾಗ್ತಿದ್ದಂತೆ ಸಂತ್ರಸ್ತ ಪತಿ ಆತನನ್ನು ಅಪಹರಿಸಿ ಏಳು ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ್ದಾನೆ.
ಈ ಕೃತ್ಯ ನಡೆದ ಮೂರು ತಿಂಗಳ ಬಳಿಕ ಬೆಳಕಿಗೆ ಬಂದಿದ್ದು, ಇದೀಗ ಅಂದರೆ ಮಾರ್ಚ್ 24 ರಂದು ಪೊಲೀಸರು ಶವವನ್ನು ಹೊರ ತೆಗೆದು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಜಗದೀಪ್ ಎಂದಿನಂತೆ ಡಿಸೆಂಬರ್ 24 ರಂದು ಸಹ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಆತನನ್ನು ಅಪಹರಿಸಲಾಯಿತು. ಈ ವೇಳೆ ಕೂಗಾಡದಂತೆ ಜಗದೀಪ್ ಬಾಯಿಗೆ ಟೇಪ್ ಸುತ್ತಿ ಕೈಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ನಂತರ ಆತನನ್ನು ಹೂತು ಹಾಕಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಸಂತ್ರಸ್ತ ಪತಿ ಅರೆಸ್ಟ್ ಮಾಡಿರುವ ಸ್ಥಳೀಯ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.