Thursday, July 16, 2026
Homeಕ್ರೈಂCRIME: ಬರ್ತ್‌ಡೇ ಪಾರ್ಟಿ ನೆಪದಲ್ಲಿ ಯುವತಿ ಮೇಲೆ ದೌರ್ಜನ್ಯ ಕೇಸ್, ಡಿಸಿಪಿ ಸ್ಫೋಟಕ ಹೇಳಿಕೆ!

CRIME: ಬರ್ತ್‌ಡೇ ಪಾರ್ಟಿ ನೆಪದಲ್ಲಿ ಯುವತಿ ಮೇಲೆ ದೌರ್ಜನ್ಯ ಕೇಸ್, ಡಿಸಿಪಿ ಸ್ಫೋಟಕ ಹೇಳಿಕೆ!

ಬೆಂಗಳೂರು: ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣನವರ್ ಅವರು ತನಿಖೆಯ ಪ್ರಮುಖ ವಿವರಗಳನ್ನು ಹಂಚಿಕೊಂಡಿದ್ದಾರೆ. ಬರ್ತ್‌ಡೇ ಪಾರ್ಟಿಯ ನೆಪದಲ್ಲಿ (Crime) ಸಂಚು ರೂಪಿಸಿ ಈ ಕೃತ್ಯ ಎಸಗಲಾಗಿದ್ದು, ಪ್ರಕರಣದ ಐದೂ ಜನ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಮಾದಕ ವಸ್ತು
ಪೊಲೀಸರಿಗೆ ಸಲ್ಲಿಕೆಯಾಗಿರುವ ದೂರಿನ ಪ್ರಕಾರ, ಪ್ರಮುಖ ಆರೋಪಿ ಸೋಮಶೇಖರ್ ಎಂಬಾತ ಹೋಟೆಲ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿ ಇದೆ ಎಂದು ನಂಬಿಸಿ ಸಂತ್ರಸ್ತೆಯನ್ನು ಕರೆಸಿಕೊಂಡಿದ್ದನು. ಆ ನಂತರ ಹೋಟೆಲ್‌ಗೆ ಹೋಗುವ ಮುನ್ನ ಸ್ನೇಹಿತರ ಮನೆಗೆ ಹೋಗಿ ಬರೋಣ ಎಂದು ಹೇಳಿ ಅಂಬರೀಶ್ ಎಂಬಾತನ ಗೆಳೆಯನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಸಂತ್ರಸ್ತೆಗೆ ನೀಡಲಾದ ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಮಾದಕ ವಸ್ತುವನ್ನು ಬೆರೆಸಿ ಕುಡಿಸಲಾಗಿದೆ.

ಸಂತ್ರಸ್ತೆ ಆರೋಪ ಏನು?
ಪಾನೀಯ ಕುಡಿದ ಯುವತಿ ಅರೆಪ್ರಜ್ಞಾವಸ್ಥೆಗೆ ತಲುಪಿದಾಗ, ಅಲ್ಲಿದ್ದ ಐವರ ಪೈಕಿ ಅಂಬರೀಶ್ ಎಂಬಾತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕೃತ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಉಳಿದ ಆರೋಪಿಗಳು ಮನೆಯ ಹಾಲಿನಲ್ಲಿ ನಿಂತು ನೋಡುತ್ತಿದ್ದರು ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.

ಯುವತಿ ನೀಡಿದ ದೂರಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ತಲಘಟ್ಟಪುರ ಠಾಣೆಯ ಪೊಲೀಸರು, ಪ್ರಮುಖ ಆರೋಪಿಗಳಾದ ಸೋಮಶೇಖರ್, ಅಂಬರೀಶ್ ಸೇರಿದಂತೆ ಘಟನೆಯಲ್ಲಿ ಭಾಗಿಯಾದ ಒಟ್ಟು ಐವರನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಘಟನಾ ಸ್ಥಳದ ಮಹಜರು ಹಾಗೂ ಆರೋಪಿಗಳ ತೀವ್ರ ವಿಚಾರಣೆ ಮುಂದುವರಿದಿದೆ.

ಶಾರ್ಟ್ ಮೂವಿ ಶೂಟಿಂಗ್ ನೆಪ: ನಟನ ಫ್ಲಾಟ್‌ನಲ್ಲೇ ಕೈಚಳಕ ತೋರಿದ ಕಿಲಾಡಿ!

ಬೆಂಗಳೂರು : ನಗರದ (Bengaluru) ಸಹಕಾರನಗರದಲ್ಲಿ ಇತ್ತೀಚೆಗೆ ವಿಶಿಷ್ಟ ಕಳ್ಳತನ ಪ್ರಕರಣವೊಂದು (theft case) ಬೆಳಕಿಗೆ ಬಂದಿದೆ. ಚಲನಚಿತ್ರ (Movie) ರಂಗದಲ್ಲಿ ಗುರುತಿಸಿಕೊಂಡಿರುವ ನಟ ಮತ್ತು ನಿರ್ದೇಶಕ ಲಿಖಿತ್ ರಾಜ್ ಅವರು ತಮ್ಮ ಮುಂಬರುವ ಕಿರುಚಿತ್ರ ‘ಫ್ಲಾಟ್ F01’ ಗಾಗಿ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ನಟನೆಯಲ್ಲಿ ಅವಕಾಶ ಅರಸಿಕೊಂಡು ಅಭಿಷೇಕ್ ಎಂಬ ಯುವಕ ಇವರನ್ನು ಸಂಪರ್ಕಿಸಿದ್ದನು. ಆತನಿಗೆ ನಟಿಸಲು ಅವಕಾಶ ನೀಡಿದ ಲಿಖಿತ್, ತಮ್ಮ ಫ್ಲಾಟ್‌ನಲ್ಲೇ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು.

ಕಳೆದ ಜೂನ್ 28 ರಂದು ನಟನ ಮನೆಯಲ್ಲೇ ಶೂಟಿಂಗ್ ಪ್ರಕ್ರಿಯೆ ಪ್ರಗತಿಯಲ್ಲಿತ್ತು. ಈ ಸಂದರ್ಭವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡ ಆರೋಪಿ ಅಭಿಷೇಕ್, ಲಿಖಿತ್ ಅವರ ಮನೆಯ ದೇವಕೋಣೆಯಲ್ಲಿದ್ದ ಚಿನ್ನದ ಸರವನ್ನು ಯಾರಿಗೂ ತಿಳಿಯದಂತೆ ಕದ್ದಿದ್ದಾನೆ. ಚಿನ್ನಾಭರಣ ಕಾಣೆಯಾಗಿರುವುದನ್ನು ಗಮನಿಸಿದ ನಟನ ತಾಯಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಹೀಗೆ ನಟನ ಕುಟುಂಬಸ್ಥರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯನ್ನು ಪತ್ತೆಹಚ್ಚಿ ಯಶಸ್ವಿಯಾಗಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೃತ್ಯ ಒಪ್ಪಿಕೊಂಡ ಆಸಾಮಿಯಿಂದ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಬಂಧಿತನ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ನ್ಯಾಯಾಂಗ ತನಿಖೆ ಮುಂದುವರಿದಿದೆ.

ಇದನ್ನೂ ಓದಿ : ನಡೆಯದ ಮದುವೆಗೆ ಟಿಕೆಟ್‌ ಕಳಿಸ್ತೀನಿ! : ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಸಿಯಾ ಗೋಯಲ್ ಚಾಟ್‌ನಲ್ಲಿತ್ತು ರಹಸ್ಯ!!

ಹೆಚ್ಚಿನ ಸುದ್ದಿ

Change Language »
error: Content is protected !!