ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಬೆಚ್ಚಿಬೀಳಿಸುವ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದ ಪ್ರಖ್ಯಾತ ವೈದ್ಯರೊಬ್ಬರನ್ನು ಚಾಕುವಿನಿಂದ ಇರಿದು ಅತ್ಯಂತ (Breaking) ಬರ್ಬರವಾಗಿ ಹತ್ಯೆ (Crime) ಮಾಡಲಾಗಿದೆ. ಮೃತರನ್ನು ಇಲ್ಲಿನ ಕವಿವಿ ರಸ್ತೆಯಲ್ಲಿರುವ ರನ್ಕಾಸ್ಟೆಲ್ಲೋ ಅಪಾರ್ಟ್‌ಮೆಂಟ್ ನಿವಾಸಿ, ಚಿರಾಯು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನ್ನಣ್ಣನವರ್ ಎಂದು ಗುರುತಿಸಲಾಗಿದೆ. ಈ ಘಟನೆಯ ವೇಳೆ ಮನೆಯಲ್ಲಿದ್ದ 10 ವರ್ಷದ ಮಗುವಿನ ಮೇಲೂ ಭೀಕರವಾಗಿ ಹಲ್ಲೆ ನಡೆಸಲಾಗಿದ್ದು, ಸದ್ಯ ವೈದ್ಯರ ಪತ್ನಿ ಡಾ. ಪ್ರಿಯಾ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಕ್ತದ ಮಡುವಿನಲ್ಲಿ ಮಗು ಒದ್ದಾಡುತ್ತಿದ್ದರೂ ಮೊಬೈಲ್ ನೋಡ್ತಿದ್ದ ತಾಯಿ!
ಕೊಲೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಪಾರ್ಟ್‌ಮೆಂಟ್‌ನ ಒಳಗೆ ಹೋದಾಗ ಕಂಡ ದೃಶ್ಯ ಅಧಿಕಾರಿಗಳನ್ನೇ ನಡುಗಿಸಿದೆ. ಡಾ. ಕಿರಣ್ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರೆ, ಅವರ 10 ವರ್ಷದ ಮಗ ತೀವ್ರ ಹಲ್ಲೆಗೊಳಗಾಗಿ ರಕ್ತಸಿಕ್ತ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ. ಆದರೆ, ಹೆತ್ತ ಮಗ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ ತಾಯಿ ಡಾ. ಪ್ರಿಯಾ ಮಾತ್ರ ಯಾವುದೇ ಆತಂಕವಿಲ್ಲದೆ ಬೆಡ್ ಮೇಲೆ ಮಲಗಿ ಮೊಬೈಲ್ ವೀಕ್ಷಿಸುತ್ತಿದ್ದರು. ಈ ಅಸಹಜ ನಡವಳಿಕೆಯನ್ನು ಕಂಡು ದಂಗಾದ ಪೊಲೀಸ್ ಕಮಿಷನರ್, ತಕ್ಷಣವೇ ಮಗುವನ್ನು ರಕ್ಷಿಸಿ ಧಾರವಾಡದ ಖಾಸಗಿ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಮಾಡಿದ್ದಾರೆ.
ವೈದ್ಯರ ಪತ್ನಿ ಪೊಲೀಸರ ವಶಕ್ಕೆ
ಪತಿಯ ಕೊಲೆಯಾಗಿದ್ದರೂ ಹಾಗೂ ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಅತ್ಯಂತ ನಿರ್ಲಕ್ಷ್ಯದಿಂದ ಮೊಬೈಲ್ ನೋಡುತ್ತಾ ಕುಳಿತಿದ್ದ ಡಾ. ಪ್ರಿಯಾ ಅವರ ನಡೆ ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಪ್ರಾಥಮಿಕ ತನಿಖೆಯ ಭಾಗವಾಗಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬರ್ಬರ ಹತ್ಯೆಯ ಹಿಂದಿರುವ ನೈಜ ಕಾರಣವೇನು? ಕೌಟುಂಬಿಕ ಕಲಹವೇ ಅಥವಾ ಇದರ ಹಿಂದೆ ಬೇರೆ ಜಾಲವಿದೆಯೇ? ಎಂಬ ನಿಟ್ಟಿನಲ್ಲಿ ಸಂಚಲನ ಸೃಷ್ಟಿಸಿರುವ ಈ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಸಿಗರೇಟ್ ತಂದಿಲ್ಲ ಎಂದು ರೈತನ ತಲೆಗೆ ಕಲ್ಲಿನಿಂದ ಹಲ್ಲೆ – ದೂರು ದಾಖಲು!
ಬೆಂಗಳೂರು: ತಮಗಿಷ್ಟವಾದ ಸಿಗರೇಟ್ (Cigarette) ತಂದುಕೊಡಲು ನಿರಾಕರಿಸಿದ ಕಾರಣಕ್ಕೆ ರೈತನೊಬ್ಬನ ಮೇಲೆ ಕಲ್ಲಿನಿಂದ ಹಲ್ಲೆ (Crime) ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲೂಕಿನ ಕೊಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಈ ಗಲಾಟೆಗೆ ಸಂಬಂಧಿಸಿದಂತೆ ಸದ್ಯ ಕೊಡಿಹಳ್ಳಿ ಪೊಲೀಸರು ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲ್ಲಿಗೌಡನದೊಡ್ಡಿ ಗ್ರಾಮದ ನಿವಾಸಿಯಾದ ಗಣೇಶ ಎನ್. (24) ಎಂಬ ಯುವ ರೈತ ಹಲ್ಲೆಗೊಳಗಾದ ದುರ್ದೈವಿಯಾಗಿದ್ದು, ಈತ ಜುಲೈ 12 ರಂದು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾನೆ. ದೂರಿನ ಅನ್ವಯ, ಇದೇ ಗ್ರಾಮದ ನಿವಾಸಿಯಾಗಿರುವ ನಾಗೇಶ ಎಂಬಾತ ಜುಲೈ 10 ರಂದು ರಾತ್ರಿ 8.30 ರ ಸುಮಾರಿಗೆ ರಸ್ತೆಯಲ್ಲಿ ಸಿಕ್ಕಾಗ ತನಗೆ ಸಿಗರೇಟ್ ತಂದುಕೊಡುವಂತೆ ಗಣೇಶನಿಗೆ ಗದರಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಸಣ್ಣ ಮಾತಿನ ಚಕಮಕಿ ನಡೆದಿದ್ದು, ತನ್ನ ಬಳಿ ಹಣವಿಲ್ಲ ಎಂದು ಹೇಳಿ ಗಣೇಶ ಅಲ್ಲಿಂದ ಹೊರಟುಹೋಗಿದ್ದಾನೆ.