Sunday, January 25, 2026
Homeಕ್ರೈಂCRIME: ಕಣ್ಣೆತ್ತಿ ನೋಡಿದ್ದಕ್ಕೆ ಚಾಕು ಇರಿದು ಕೊ*ಲೆಗೆ ಯತ್ನ; ಜಾಮೀನು ಮೇಲೆ ಹೊರಗೆ ಬಂದಿದ್ದ ಆರೋಪಿಯಿಂದ...

CRIME: ಕಣ್ಣೆತ್ತಿ ನೋಡಿದ್ದಕ್ಕೆ ಚಾಕು ಇರಿದು ಕೊ*ಲೆಗೆ ಯತ್ನ; ಜಾಮೀನು ಮೇಲೆ ಹೊರಗೆ ಬಂದಿದ್ದ ಆರೋಪಿಯಿಂದ ಕೃತ್ಯ!

ಬೆಳಗಾವಿ : ಕಣ್ಣೆತ್ತಿ ನೋಡಿದ್ದಕ್ಕೆ ಜಾಮೀನಿನ ಮೇಲೆ ಹೊರಬಂದಿದ್ದವ ಚಾಕು ಇರಿದು (crime) ಕೊಲೆ ಯತ್ನ ನಡೆಸಿರುವ ಘಟನೆ ಬೆಳಗಾವಿಯ (Belagavi) ನ್ಯೂ ಗಾಂಧಿನಗರ ಪ್ರದೇಶದಲ್ಲಿ ನಡೆದಿದೆ.

ಜುಶಾನ್ ಚಾಕು ಇರಿತಕ್ಕಡ ಒಳಗಾದ ಯುವಕ ಹಾಗೂ ಮುಂಜಾಮ್ಮಿಲ್ ಸತ್ತಿಗೇರಿ ಆರೋಪಿ. ಮಸೀದಿ ಎದುರು ಈ ಘಟನೆ ನಡೆದಿದ್ದು, ಶುಕ್ರವಾರದ ನಮಾಜ್ ಮುಗಿಸಿ ಹೊರಬಂದ ವೇಳೆ ಮಾತಿನ ಚಕಮಕಿ ಗಲಾಟೆಗೆ ತಿರುಗಿದೆ ಎನ್ನಲಾಗಿದೆ. ಈ ವೇಳೆ ಜುಶಾನ್ ಎಂಬ ಯುವಕನಿಗೆ ಮುಜಾಮಿಲ್ ಎಂಬಾತ ಚಾಕು ಇರಿದಿದ್ದಾನೆ.

ಆರೋಪಿಯಾಗಿರುವ ಮುಜಾಮಿಲ್ ಸತ್ತಿಗೇರಿ ಎಂಬ ವ್ಯಕ್ತಿ, ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಮುಜಾಮಿಲ್ ಸತ್ತಿಗೇರಿಯನ್ನು ವಶಕ್ಕೆ ಪಡೆದಿದ್ದಾರೆ.

ಗಂಭೀರವಾಗಿ ಗಾಯಗೊಂಡ ಜುಶಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಬೆಳಗಾವಿ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಬೆಳಗಾವಿಯಲ್ಲಿ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃನಾಳ್ ಹೆಬ್ಬಾಳ್ಕರ್ ಅವರ ಕಾರು ಚಾಲಕ ಬಸವಂತ್ ಮೇಲೆ ಚಾಕು ಇರಿತ ಪ್ರಕರಣ ನಡೆದಿತ್ತು.

ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ – ನಾಲ್ವರು ಅರೆಸ್ಟ್

ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಪುತ್ರನ ಕಾರು ಚಾಲಕ (Car driver) ಬಸವಂತ ಕಡಲೇಕರ್ ಗೆ ಚಾಕು ಇರಿದ (Knife stabbing) ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಿವಯ್ಯ ಪೂಜಾರಿ, ನಿತೇಶ್ ಬಡಿಗೇರ, ಮೌನಪ್ಪ ಹಾಗೂ ಸಂಪತ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಜ.6ರಂದು ಕಾರು ನಿಲ್ಲಿಸಿ ಪಕ್ಕದಲ್ಲೇ ನಿಂತಿದ್ದ ಬಸವಂತನನನ್ನು ಗುರಿಯಾಗಿಸಿಕೊಂಡು ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಚಾಕು ಇರಿದು ಎಸ್ಕೇಪ್ ಆಗಿದ್ದರು.

ಹೀಗೆ ಚಾಕು ಇರಿದ ದುಷ್ಕರಿಮಗಳು ಚಾಲಕ ಬಸವಂತ ಕಡಲೇಕರ್ ಸ್ನೇಹಿತರೇ ಎನ್ನಲಾಗಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಕಿರಿಕ್ ನಡೆದಿದ್ದು, ಇದೇ ಕಾರಣಕ್ಕೆ ಚಾಕು ಇರಿದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ:  ನಕಲಿ ಖಾತೆಯಿಂದ ದುಡ್ಡಿಗಾಗಿ ಡಿಮ್ಯಾಂಡ್, ಡಿಸಿಪಿ ಹೆಸರಲ್ಲೇ ವಂಚನೆಗೆ ಯತ್ನ!

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!