ಇಂಗ್ಲೆಂಡ್: 2027ರ ಏಕದಿನ ಕ್ರಿಕೆಟ್ (ODI) ವಿಶ್ವಕಪ್‌ಗೆ (World Cup 2027) ಮುನ್ನ ನಡೆಯುವ ಅರ್ಹತಾ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಂತಿಮಗೊಳಿಸಿದೆ. ಈ ಟೂರ್ನಿಯು 2027ರ ಫೆಬ್ರವರಿ 22ರಿಂದ ಮಾರ್ಚ್ 23ರವರೆಗೆ ನಡೆಯಲಿದ್ದು, ಆತಿಥೇಯ ರಾಷ್ಟ್ರದ ಘೋಷಣೆ ಇನ್ನೂ ಆಗಿಲ್ಲ.
ಇದನ್ನೂ ಓದಿ : ಶ್ರೀಲಂಕಾ ಟೆಸ್ಟ್ ಸರಣಿಯಿಂದ ಬುಮ್ರಾ ಔಟ್ – ಟೀಂ ಇಂಡಿಯಾಗೆ ಕಾಡಲಿದೆ ಜಸ್ಪ್ರೀತ್ ಅನುಪಸ್ಥಿತಿ
ಒಟ್ಟು 10 ತಂಡಗಳು ಸ್ಪರ್ಧಿಸಲಿದ್ದು, ಚಾಂಪಿಯನ್ ತಂಡ ನೇರವಾಗಿ ವಿಶ್ವಕಪ್‌ಗೆ ಪ್ರವೇಶ ಪಡೆಯಲಿದೆ. ಎರಡರಿಂದ ನಾಲ್ಕನೇ ಸ್ಥಾನ ಪಡೆದ ತಂಡಗಳು ಸೂಪರ್ ಸೀರೀಸ್‌ನ ಮೊದಲ ಹಂತದಲ್ಲಿ ಮತ್ತೊಮ್ಮೆ ಪೈಪೋಟಿ ನಡೆಸಲಿವೆ. ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ರ‍್ಯಾಂಕಿಂಗ್‌ನಲ್ಲಿ ಕೊನೆಯ ಎರಡು ತಂಡಗಳು, ಸಿಡಬ್ಲ್ಯುಸಿ ಲೀಗ್-2ರಿಂದ ನಾಲ್ಕು ತಂಡಗಳು ಹಾಗೂ ಪ್ಲೇಆಫ್ ಮೂಲಕ ನಾಲ್ಕು ತಂಡಗಳು ಅರ್ಹತಾ ಟೂರ್ನಿಗೆ ಬರಲಿವೆ.
ಈ ನಡುವೆ, ಎರಡು ಬಾರಿ ವಿಶ್ವಕಪ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡದ ಮೇಲೆ ವಿಶೇಷ ಗಮನ ನೆಟ್ಟಿದೆ. 2026ರ ಸೆಪ್ಟೆಂಬರ್ 30ರ ವೇಳೆಗೆ ಐಸಿಸಿ ರ‍್ಯಾಂಕಿಂಗ್‌ನ ಅಗ್ರ ಎಂಟು ತಂಡಗಳೊಂದಿಗೆ ಸಹ ಆತಿಥೇಯರಾದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನೇರ ಪ್ರವೇಶ ಪಡೆಯಲಿವೆ. ಪ್ರಸ್ತುತ 10ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್‌ಗೆ ಉಳಿದಿರುವ ಪಂದ್ಯಗಳ ಫಲಿತಾಂಶ ಹಾಗೂ ಐರ್ಲೆಂಡ್-ಅಫ್ಘಾನಿಸ್ತಾನ ಸರಣಿಯ ಫಲವೂ ನಿರ್ಣಾಯಕವಾಗಲಿದೆ.