ಸ್ಪೇನ್: ಸ್ಪೇನ್‌ನಲ್ಲಿನ ಒಳಚರಂಡಿ ಕೆಲಸಗಾರನ ಚರ್ಮದ ಒಳಗೆ ಹುಳುಗಳು ತೆವಳುತ್ತಿರುವುದನ್ನು ವೈದ್ಯರು ನೋಡಿ ಗಾಬರಿಗೊಂಡಿದ್ದಾರೆ. ಇದೀಗ ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯಲ್ಲಿ, 64 ವರ್ಷದ ವ್ಯಕ್ತಿಯ ಅಪರೂಪದ ಹೈಪರ್ ಇನ್ಫೆಕ್ಷನ್ಅನ್ನು ಹೊಂದಿದ್ದು, ಸ್ಟ್ರಾಂಗಿಲೋಡಯಾಸಿಸ್ ಸ್ಟೆರ್ಕೊರಾಲಿಸ್ ಗೆ ತುತ್ತಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಪ್ರಪಂಚದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ವಾಸಿಸುವ ಮತ್ತು ಸ್ಟ್ರಾಂಗಿಲೋಡಯಾಸಿಸ್ ಎಂಬ ರೋಗವನ್ನು ಉಂಟುಮಾಡುವ ಪರಾವಲಂಬಿ ರೌಂಡ್‌ವರ್ಮ್ ಪ್ರಭೇದವಾಗಿದೆ.
ಒಳಚರಂಡಿ ಕೆಲಸ ಮಾಡುವ ನೌಕರನು ಸ್ವಲ್ಪಮಟ್ಟಿಗೆ ಅತಿಸಾರ ಮತ್ತು ತುರಿಕೆ ದದ್ದುಗಳನ್ನು ಅನುಭವಿಸುತ್ತಿದ್ದ ಕಾರಣ ಆಸ್ಪತ್ರೆಗೆ ವೈದ್ಯರ ಬಳಿ ಹೋಗಿದ್ದಾನೆ. ಅಲ್ಲಿ ವೈದ್ಯರು ವ್ಯಕ್ತಿಯ ಚರ್ಮದ ಕೆಳಗೆ ಹುಳುಗಳು ಸುಳಿದಾಡುತ್ತಿರುವುದನ್ನು ಕಂಡು ಅಚ್ಚರಿಕೊಂಡಿದ್ದಾರೆ.