Monday, April 13, 2026
Homeಟಾಪ್ ನ್ಯೂಸ್COVID VIRUS : ಕೋವಿಡ್ ವೈರಸ್‌​ ಲ್ಯಾಬ್​ನಲ್ಲಿ ತಯಾರಿಸಿದ್ದಲ್ಲ..! ಮಾರಕ ವೈರಾಣು ಹುಟ್ಟಿದ್ದು ಎಲ್ಲಿ ಗೊತ್ತಾ..?

COVID VIRUS : ಕೋವಿಡ್ ವೈರಸ್‌​ ಲ್ಯಾಬ್​ನಲ್ಲಿ ತಯಾರಿಸಿದ್ದಲ್ಲ..! ಮಾರಕ ವೈರಾಣು ಹುಟ್ಟಿದ್ದು ಎಲ್ಲಿ ಗೊತ್ತಾ..?

ಬೀಜಿಂಗ್ : ಇಡೀ ಜಗತ್ತನ್ನೇ ನಲುಗಿಸಿದ್ದ, ಲಕ್ಷಾಂತರ ಜನರನ್ನು ಬಲಿಪಡೆದಿದ್ದ, ಕೋಟ್ಯಾಂತರ ಜನರ ಜೀವನವನ್ನು ಹಾಳು ಮಾಡಿದ್ದ ಕೊರೊನಾ ವೈರಸ್ ಎಲ್ಲಿ ಹುಟ್ಟಿತ್ತು ಅನ್ನೋದೇ ನಿಗೂಢವಾಗಿದೆ. ಆದರೆ, ಇದೀಗ ವಿಜ್ಞಾನಿಗಳು ಇದೀಗ ಕೊರೊನಾ ರಹಸ್ಯ ಭೇದಿಸಿದ್ದಾರೆ.

ಕೊರೊನಾ ವೈರಸ್ ಮೊದಲು ಕಾಡಿನಲ್ಲಿ ಕಾಣಿಸಿಕೊಂಡಿತ್ತು. ಕಾಲಾನಂತರದಲ್ಲಿ ಪ್ರಾಣಿಗಳಿಗೆ ಹರಡಿ, ಆ ಪ್ರಾಣಿಗಳ ಮೂಲಕ ವುಹಾನ್ ಮಾರ್ಕೆಟ್​​ಗೆ ಬಂದು, ಮನುಷ್ಯನ ದೇಹ ಸೇರಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ವೈದ್ಯಕೀಯ ಕಾಲೇಜಿನ ಸಂಶೋಧಕರು ತಂಡ, ಕೊರೊನಾಗೆ ಕಾರಣವಾಗುವ ವೈರಸ್ SARS-CoV-2ನ ಮೂಲ ಪತ್ತೆಗೆ ಮುಂದಾಗಿದ್ದರು. ಈ ವೈರಸ್ ಸಾಂಕ್ರಾಮಿಕ ರೋಗವಾಗಿ ಜನರ ದೇಹ ಸೇರುವ ಕೆಲವೇ ಕೆಲವು ವರ್ಷಗಳ ಮೊದಲು ರೂಪುಗೊಂಡೊತ್ತು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ಕೊರೊನಾ ವೈರಸ್ ಜನರ ದೇಹ ಸೇರುವ ಕೆಲವೇ ಕೆಲವು ವರ್ಷಗಳ ಮೊದಲು ಪಶ್ಚಿಮ ಚೀನಾ ಇಲ್ಲವೇ ಉತ್ತರ ಲಾವೋಸ್‌ನಲ್ಲಿ ಕಾಣಿಸಿಕೊಂಡಿತ್ತು. ಕಾಲಾನಂತರದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಿತ್ತು.

ಕೊರೊನಾ ಸೃಷ್ಟಿಸಿದ ಅನಾಹುತಗಳು!

ಜಗತ್ತಿನಾದ್ಯಂತ 704 ಕೋಟಿ ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡು 70 ಲಕ್ಷಕ್ಕೂ ಹೆಚ್ಚು ಜನರನ್ನು ಕೋವಿಡ್ ಬಲಿ ಪಡೆದಿತ್ತು. ಜೊತೆಗೆ ಕೋಟಿ ಕೋಟಿ ಜನರ ಕನಸುಗಳಿಗೆ ಕೊಳ್ಳಿ ಇಟ್ಟಿತ್ತು.

ಭಾರತವನ್ನು ಕಾಡಿತ್ತು ಡೆಡ್ಲಿ ಲಾಕ್​​ಡೌನ್

ಕೊರೊನಾ ವೈರಸ್ ಕಾಣಿಸಿಕೊಂಡರೆ ಸಾಕು, ರೋಗಿಯ ಸುತ್ತಮುತ್ತಲ ಮನೆಗಳನ್ನು ಸೇರಿಸಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ಯಾವಾಗ ಸೋಂಕು ಕೈಮೀರಿ ಹೋಗುತ್ತಿದೆ ಅನ್ನಿಸ್ತೋ ಆಗ ದೇಶಾದ್ಯಂತ ಮೂರು ಹಂತದಲ್ಲಿ ಲಾಕ್​ಡೌನ್ ಮಾಡಲಾಗಿತ್ತು.

ದೇಶದಲ್ಲಿ ಲಾಕ್​ಡೌನ್ ಹೇರಿಕೆ ಯಾವಾಗ ಆಗಿತ್ತು? 

  • ಕೊರೊನಾ ಲಾಕ್​ಡೌನ್ ಮೊದಲ ಹಂತ : 25 ಮಾರ್ಚ್ 2020ರಿಂದ 14 ಏಪ್ರಿಲ್ 2020 (21 ದಿನ)
  • ಕೊರೊನಾ ಲಾಕ್​ಡೌನ್ 2ನೇ ಹಂತ : 15 ಏಪ್ರಿಲ್ 2020ರಿಂದ 3 ಮೇ 2020 (19 ದಿನ)
  • ಕೊರೊನಾ ಲಾಕ್​ಡೌನ್ 3ನೇ ಹಂತ : 4 ಮೇ 2020ರಿಂದ 17 ಮೇ 2020 (14 ದಿನ)

ಹೆಚ್ಚಿನ ಸುದ್ದಿ

Change Language »
error: Content is protected !!