ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಬಟ್ಟೆ ಅಂಗಡಿ ಮೇಲಿರುವ ಮನೆಗೂ ವ್ಯಾಪಿಸಿದೆ. ಪರಿಣಾಮ, ಇಬ್ಬರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಮೃತರನ್ನು ಬಟ್ಟೆ ವ್ಯಾಪಾರಿ ದಂಪತಿಗಳಾದ ರಾಘವೇಂದ್ರ ಹಾಗೂ ಶಿಲ್ಪಾ ಎಂದು ಗುರುತಿಸಲಾಗದೆ.
ಅಂಗಡಿಯಲ್ಲಿ ಹೊತ್ತಿಕೊಂಡ ಬೆಂಕಿ ಜ್ವಾಲೆ ಮನೆ ಮೇಲ್ಭಾಗದಲ್ಲಿ ವ್ಯಾಪಿಸಿದ್ದು, ಬೆಂಕಿ ಕಂಡ ದಂಪತಿಗಳು ಜೀವ ರಕ್ಷಣೆ ಮಾಡಿಕೊಳ್ಳಲು ಬಾತ್ ರೂಂ ಗೆ ತೆರಳಿದ್ದಾರೆ. ದಟ್ಟವಾಗಿ ಹೊಗೆ ಆವರಿಸಿದ್ದು, ಉಸಿರುಗಟ್ಟಿ ದಂಪತಿ ಮೃತಪಟ್ಟಿದ್ದಾರೆ.
ಸೋಮವಾರ ನಸುಕಿನ ಜಾವ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸೈದಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.