Wednesday, May 14, 2025
Homeಟಾಪ್ ನ್ಯೂಸ್VIRAL NEWS: ದೇಶ ಮೊದಲು..ಮದುವೆ ಆಮೇಲೆ - ಮಾಕ್ ಡ್ರಿಲ್‌ಗಾಗಿ ವಿವಾಹವನ್ನೇ ಮುಂದೂಡಿದ ದೇಶಪ್ರೇಮಿ !

VIRAL NEWS: ದೇಶ ಮೊದಲು..ಮದುವೆ ಆಮೇಲೆ – ಮಾಕ್ ಡ್ರಿಲ್‌ಗಾಗಿ ವಿವಾಹವನ್ನೇ ಮುಂದೂಡಿದ ದೇಶಪ್ರೇಮಿ !

ಪಾಟ್ನಾ: ನಿನ್ನೆ (ಮೇ 7) ಭಾರತದಾದ್ಯಂತ 259 ಕಡೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗಿದ್ದು, ಭಾರತೀಯರು ಇದಕ್ಕೆ ಅದ್ಭುತವಾಗಿ ಸ್ಪಂದಿಸಿದ್ದಾರೆ. ಈ ಮಧ್ಯೆ ಬಿಹಾರದಲ್ಲೊಂದು ಆಚ್ಚರಿಯ ಘಟನೆ ನಡೆದಿತ್ತು. ಅಣಕು ಕವಾಯತಿನಲ್ಲಿ ಭಾಗವಹಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಮದುವೆಯನ್ನೇ ಮುಂದೂಡಿಕೆ ಮಾಡಿದ್ದಾನೆ.

ಹೌದು, ಬಿಹಾರದ ವರನೊಬ್ಬನ ಮದುವೆ ಇದೇ ಮಾಕ್ ಡ್ರಿಲ್ ನಡೆಯುವ ದಿನದಂದೇ ನಿಗದಿಯಾಗಿತ್ತು. ಆದರೆ ವರ ತೆರಳಿದ್ದು ಮದುವೆ ಮಂಟಪದ ಬದಲು ಮಾಕ್ ಡ್ರಿಲ್ ಪ್ರದರ್ಶನಕ್ಕೆ! ಇದಕ್ಕಾಗಿ ಆತ ತನ್ನ ಮದುವೆಯನ್ನು ಕೆಲ ಗಂಟೆಗಳ ಕಾಲ ಮುಂದೂಡಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಹಾರದ ಪುರ್ನಿಯಾ ಜಿಲ್ಲೆಯ ಸುಶಾಂತ್ ಕುಶ್ವಾಹ, ನವ ವರ ದೇಶ ಮೊದಲು, ಉಳಿದ್ದೆಲ್ಲವೂ ಆ ನಂತರ..ನಮ್ಮ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದು ನಮಗೆ ಹೆಮ್ಮೆಯ ಸಂಗತಿ. ಹೀಗಾಗಿ ನಾನು ಮೊದಲು ಅಣಕು ಕವಾಯತಿನಲ್ಲಿ ಭಾಗಿಯಾಗಲು ಬಂದೆ ಎಂದು ಹೇಳುವ ಮೂಲಕ ತನ್ನ ದೇಶಪ್ರೇಮ ಮೆರೆದಿದ್ದಾನೆ.

ಹೆಚ್ಚಿನ ಸುದ್ದಿ

error: Content is protected !!