Thursday, July 16, 2026
Homeಟಾಪ್ ನ್ಯೂಸ್BIG NEWS : ಮೋದಿ ಸಂಪುಟ ಪುನಾರಚನೆಗೆ ಮುಹೂರ್ತ ನಿಗದಿ - ಅಮಿತ್ ಶಾಗೆ ಉಪಪ್ರಧಾನಿ...

BIG NEWS : ಮೋದಿ ಸಂಪುಟ ಪುನಾರಚನೆಗೆ ಮುಹೂರ್ತ ನಿಗದಿ – ಅಮಿತ್ ಶಾಗೆ ಉಪಪ್ರಧಾನಿ ಪಟ್ಟ?

ನವದೆಹಲಿ: ಉತ್ತರ ಪ್ರದೇಶ(Uttar Pradesh) ಮತ್ತು ಪಂಜಾಬ್ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದಲ್ಲಿ(Central Government) ಭಾರಿ ರಾಜಕೀಯ ಬದಲಾವಣೆಗೆ ಮುಹೂರ್ತ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ನೇತೃತ್ವದ ಸಚಿವ ಸಂಪುಟ ಪುನಾರಚನೆ ಮತ್ತು ಪ್ರಮುಖ ಖಾತೆಗಳ ಮರುಹಂಚಿಕೆ ಕುರಿತು ದೆಹಲಿ ರಾಜಕಾರಣದಲ್ಲಿ ಈಗ ತೀವ್ರ ಚರ್ಚೆಗಳು ಆರಂಭವಾಗಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸದಿದ್ದರೂ, ಆಡಳಿತಾರೂಢ ಬಿಜೆಪಿಯ ಹೈಕಮಾಂಡ್ ಮಟ್ಟದಲ್ಲಿ ಸುದೀರ್ಘ ಸಮಾಲೋಚನೆಗಳ ನಂತರ ನೂತನ ನಾಯಕರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನಕ್ಕೂ ಮುನ್ನವೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಇದು ಮೋದಿ ಸರ್ಕಾರದ ಆಡಳಿತ ವೈಖರಿಯಲ್ಲಿ ಪ್ರಮುಖ ಬದಲಾವಣೆ ತರಲಿದೆ ಎನ್ನಲಾಗಿದೆ.

ಅಮಿತ್ ಶಾ ಬಣಕ್ಕೆ ಸಿಗಲಿದೆಯೇ ಹೆಚ್ಚಿನ ಪ್ರಾತಿನಿಧ್ಯ?
ಈ ಬಾರಿಯ ಸಂಪುಟ ಪುನಾರಚನೆಯು ಬಿಜೆಪಿಯ ಆಂತರಿಕ ಅಧಿಕಾರ ಸಮತೋಲನದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣದ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಪ್ರಮುಖ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ. ಇದೇ ವೇಳೆ, ಪ್ರಸ್ತುತ ಸಂಪುಟದಲ್ಲಿರುವ ಹೈಪ್ರೊಫೈಲ್ ಸಚಿವರಾದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ರಾಜಕೀಯ ಭವಿಷ್ಯದ ಕುರಿತು ಮಾಧ್ಯಮಗಳಲ್ಲಿ ಭಾರಿ ಊಹಾಪೋಹಗಳು ಎದ್ದಿವೆ. ಇವರನ್ನು ಪ್ರಮುಖ ಇಲಾಖೆಗಳಿಂದ ಮುಕ್ತಗೊಳಿಸಿ, ಪಕ್ಷದ ಸಾಂಸ್ಥಿಕ ಜವಾಬ್ದಾರಿಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ನೇತೃತ್ವದಲ್ಲಿ ಪಕ್ಷದ ಹೊಸ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲೇ ಸರ್ಕಾರದ ಸಂಪುಟದಲ್ಲೂ ಬದಲಾವಣೆ ತರಲಾಗುತ್ತಿದೆ. ಮುಂಬರುವ ಚುನಾವಣೆಗಳನ್ನು ಎದುರಿಸಲು ಆಡಳಿತ ಮತ್ತು ಸಂಘಟನೆ ಎರಡನ್ನೂ ಏಕಕಾಲದಲ್ಲಿ ಬಲಪಡಿಸಲು ಮೋದಿಯವರು ಈ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.

ಅತ್ಯಂತ ದೊಡ್ಡ ಹೈಲೈಟ್: ಅಮಿತ್ ಶಾಗೆ ‘ಉಪಪ್ರಧಾನಿ’ ಪಟ್ಟ!
ಇವೆಲ್ಲದರ ನಡುವೆ, ಈ ಇಡೀ ಸಂಪುಟ ಪುನಾರಚನೆಯ ಅತ್ಯಂತ ದೊಡ್ಡ ಹೈಲೈಟ್ ಎಂದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ‘ಉಪಪ್ರಧಾನಿ’ (Deputy Prime Minister) ಹುದ್ದೆಗೆ ಏರಿಸುವ ಸಾಧ್ಯತೆಗಳಿರುವುದು. ಸದ್ಯಕ್ಕೆ ಸರ್ಕಾರದ ನೀತಿಗಳು ಮತ್ತು ಪಕ್ಷದ ಕಾರ್ಯತಂತ್ರಗಳ ಮೇಲೆ ಅಮಿತ್ ಶಾ ಅವರು ಈಗಾಗಲೇ ಹೊಂದಿರುವ ಅಪಾರ ಪ್ರಭಾವಕ್ಕೆ ಈ ಹೊಸ ಹುದ್ದೆಯಿಂದ ಯಾವುದೇ ವ್ಯತ್ಯಾಸವಾಗದಿದ್ದರೂ, ಮುಂಬರುವ ದಿನಗಳಲ್ಲಿ ಬಿಜೆಪಿಯ ಭವಿಷ್ಯದ ನಾಯಕತ್ವದ ದಿಕ್ಸೂಚಿ ಯಾವುದು ಎಂಬುದನ್ನು ಹೈಕಮಾಂಡ್ ಜಗತ್ತಿಗೆ ಸಾರಲು ಈ ನಿರ್ಧಾರ ಕೈಗೊಳ್ಳುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜವಾಬ್ದಾರಿಯಿಂದ ಹರ್ದೀಪ್ ಸಿಂಗ್ ಪುರಿ ಅವರನ್ನು ಬದಲಾಯಿಸಿ, ಆ ಸ್ಥಾನಕ್ಕೆ ಹೊಸ ಮುಖವನ್ನು ತರಲು ಪ್ರಧಾನಿ ಮೋದಿ ಯೋಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ನಿಮ್ಮ ದೇಶದಲ್ಲೇ ಕೋಟ್ಯಂತರ ಜನ ಊಟಕ್ಕೆ ಪರದಾಡುತ್ತಿದ್ದಾರೆ, ಮೊದಲು ಅದನ್ನು ನೋಡಿಕೊಳ್ಳಿ -ಟ್ರಂಪ್‌ಗೆ ಇರಾನ್ ತಿರುಗೇಟು

ಹೆಚ್ಚಿನ ಸುದ್ದಿ

Change Language »
error: Content is protected !!