Wednesday, February 19, 2025
Homeರಾಜಕೀಯಅತಂತ್ರ ಸರ್ಕಾರ ಇಲ್ಲ! – ಮತ್ತೊಂದು ಚುನಾವಣಾ ಸಮೀಕ್ಷೆ ಬಹಿರಂಗ

ಅತಂತ್ರ ಸರ್ಕಾರ ಇಲ್ಲ! – ಮತ್ತೊಂದು ಚುನಾವಣಾ ಸಮೀಕ್ಷೆ ಬಹಿರಂಗ

ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಕರ್ನಾಟಕದ ಫಲಿತಾಂಶದ ಬಗ್ಗೆ ಸಾಲುಸಾಲಾಗಿ ಸಮೀಕ್ಷೆಗಳು ಹೊರಬೀಳುತ್ತಿವೆ. ಈ ಪಾಲಿಗೆ ಸ್ಮಾಲ್ ಬಾಕ್ಸ್ ಇಂಡಿಯಾ ಎಂಬ ಮತ್ತೊಂದು ಸಮೀಕ್ಷಾ ಸಂಸ್ಥೆ ಸೇರ್ಪಡೆಯಾಗಿದ್ದು, ಚುನಾವಣಾ ಫಲಿತಾಂಶದ ಬಗ್ಗೆ ತನ್ನ ಭವಿಷ್ಯ ನುಡಿದಿದೆ.
ಸ್ಮಾಲ್ ಬಾಕ್ಸ್ ಇಂಡಿಯಾ ಟ್ವೀಟ್ ಮಾಡಿರುವಂತೆ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸುಭದ್ರ ಸರ್ಕಾರ ರಚನೆಯಾಗಲಿದೆ. ಅತಂತ್ರ ಸರ್ಕಾರ ಬರುವುದಿಲ್ಲ ಎಂದು ನುಡಿದಿರುವ ಸ್ಮಾಲ್ ಬಾಕ್ಸ್ ಇಂಡಿಯಾ ನಡೆಸಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನಗಳಿಸುವ ಪಕ್ಷವಾಗಿ ಹೊಮ್ಮಿದೆ.
ಕಾಂಗ್ರೆಸ್ – 115 ರಿಂದ 127 ಸ್ಥಾನಗಳು, ಬಿಜೆಪಿ -68 ರಿಂದ 80 ಮತ್ತು ಜೆಡಿಎಸ್ 23 ರಿಂದ 35 ಸ್ಥಾನಗಳನ್ನು ಗಳಿಸಬಹುದೆಂದು ಕೂಲ್ ಬಾಕ್ಸ್ ಇಂಡಿಯಾ ಸಮೀಕ್ಷಾ ವರದಿ ಲೆಕ್ಕಾಚಾರ ಹಾಕಿದೆ.

ಶೇಕಡಾವಾರು ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಶೇ 41, ಬಿಜೆಪಿ ಶೇ 36, ಜೆಡಿಎಸ್ ಶೇ 18 ಮತ್ತು ಇತರೆ ಪಕ್ಷಗಳು ಶೇ 5ರಷ್ಟು ಮತ ಬಾಚಲಿವೆ.
ಪ್ರಸ್ತುತ ಲೆಕ್ಕಾಚಾರವು ಎಬಿಪಿ- ಸಿವೋಟರ್ಸ್ ಮತ್ತಿತರ ಸಮೀಕ್ಷಾ ಸಂಸ್ಥೆಗಳ ವರದಿಗೆ ಹತ್ತಿರದಲ್ಲಿದೆ. ಆದರೆ ಜೀ ನ್ಯೂಸ್ ಸಮೀಕ್ಷಾ ವರದಿಯ ಪ್ರಕಾರ ಈ ಬಾರಿ ಯಾವ ಪಕ್ಷವೂ ಬಹುಮತ ಗಳಿಸುವುದಿಲ್ಲ. ಕೂಲ್‍ಬಾಕ್ಸ್ ಇಂಡಿಯ ತನ್ನ ಟ್ವಿಟರ್ ಖಾತೆಯಲ್ಲಿ ಈ ಮುನ್ನ ಗುಜರಾತ್, ದೆಹಲಿ ಪಾಲಿಕೆ ಹಾಗೂ ಹಿಮಾಚಲ ಪ್ರದೇಶದಲ್ಲಿ ನುಡಿದಿರುವ ಭವಿಷ್ಯ ಸತ್ಯವಾಗಿದೆ ಎಂದು ಹೇಳಿಕೊಂಡಿದೆ.

ಹೆಚ್ಚಿನ ಸುದ್ದಿ

error: Content is protected !!