ಚಿಕ್ಕಮಗಳೂರು: ಉಚಿತ ಗಿಫ್ಟ್‍ಗಳಿಗೆ ಬಾಯ್ಬಿಡುವ ಮತದಾರರಿಗೆ ಆತಂಕ ತರುವಂಥ ಸುದ್ದಿಯೊಂದು ಹೊರಬಿದ್ದಿದೆ. ಶಾಸಕರು ಉಚಿತವಾಗಿ ಹಂಚಿದ್ದ ಕಳಪೆ ಗುಣಮಟ್ಟದ ಕುಕ್ಕರ್ ಸ್ಫೋಟಗೊಂಡಿರುವ ಘಟನೆ ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ನಡೆದಿದೆ. ಸ್ಫೋಟ ಸಂಭವಿಸಿದಾಗ ತಾಯಿಮಗು ಅದೃಷ್ಟವಶಾತ್ ಹೊರಗಿದ್ದ ಕಾರಣ ಯಾವುದೇ ಪ್ರಮಾದ ಸಂಭವಿಸಿಲ್ಲ.
ಶಾನುವಳ್ಳಿ ಗ್ರಾಮದಲ್ಲಿ ಮೂರು ದಿನಗಳ ಹಿಂದಷ್ಟೇ ಶಾಸಕ ಟಿ.ಡಿ.ರಾಜೇಗೌಡ ಹಂಚಿದ್ದರು ಎನ್ನಲಾದ ಕುಕ್ಕರ್‍ನ್ನು ದೇವರಾಜ್ ಎಂಬುವವುರ ಮನೆಗೆ ತಂದಿದ್ದರು. ಇಂದು ಪ್ರಯೋಗಾರ್ಥವಾಗಿ ಅದೇ ಕುಕ್ಕರ್ ಬಳಸಿ ಅಡುಗೆ ಮಾಡಲು ತೊಡಗಿದ್ದರು. ಮತದಾರರ ಮನೋಗುಣಕ್ಕೆ ತಕ್ಕಂಥ ಗುಣಮಟ್ಟ ಹೊಂದಿದ್ದ ಕುಕ್ಕರ್ ಕೆಲವೇ ನಿಮಿಷಗಳಲ್ಲಿ ದೊಡ್ಡ ಸದ್ದಿನೊಂದಿಗೆ ಸ್ಫೋಟಗೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಎಲ್ಲೆಲ್ಲಿಯೂ ಕುಕ್ಕರ್‍ಗಳು ಸದ್ದು ಮಾಡುತ್ತಿದ್ದು, ಪ್ರತಿ ಕ್ಷೇತ್ರಗಳಲ್ಲಿಯೂ ಉಚಿತ ಕುಕ್ಕರ್ ಫಲಾನುಭವಿಗಳು ಈಗ ಆತಂಕಕ್ಕೊಳಗಾಗಿದ್ದಾರೆ.