ಪ್ರಜಾಧ್ವನಿ ಯಾತ್ರೆ ವೇಳೆ ಡಿಕೆ ಶಿವಕುಮಾರ್ ಕಲಾವಿದೆರೆಡೆಗೆ 500 ರೂಗಳ ಕಂತೆಯನ್ನು ಎಸೆದು ವಿವಾದ ಸೃಷ್ಟಿಸಿದ್ದಾರೆ. ಮಂಗಳವಾರ ಮಂಡ್ಯದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಈ ಘಟನೆ ನಡೆದಿದೆ.
ಈ ಘಟನೆ ವೈರಲ್ ಆಗಿದ್ದು, ನೋಟನ್ನು ಎಸೆದಿರುವುದರ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಸಿಎಂ ಬೊಮ್ಮಾಯಿ ಡಿಕೆಶಿಯನ್ನು ಟೀಕಿಸಿದ್ದು, “ಡಿಕೆ ಶಿವಕುಮಾರ್ ಅಧಿಕಾರದ ದರ್ಪ ತೋರಿಸುತ್ತಾರೆ. ಕರ್ನಾಟಕದ ಜನರು ಭಿಕ್ಷುಕರು ಎಂದು ಅವರು ಭಾವಿಸಿದ್ದಾರೆ, ಅದೇ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಕಿಡಿ ಕಾರಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಇನ್ನೂ ಹಲವು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸದೆ, ಬಿಜೆಪಿ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಬಿಜೆಪಿ ಎಂಎಲ್ಸಿ ರವಿಕುಮಾರ್ ನೇತೃತ್ವದ ನಿಯೋಗ ಡಿಕೆಶಿ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಜತೆಗೆ, ಎಸ್ಡಿಪಿಐ ಮುಖಂಡರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಚಾರವಾಗಿಯೂ ದೂರು ಸಲ್ಲಿಸಲಾಗಿದೆ.