Sunday, June 7, 2026
Homeಟಾಪ್ ನ್ಯೂಸ್CONGRESS Vs BJP: ಸಿದ್ದು, ಡಿಕೆಶಿ ಕುರ್ಚಿ ಕದನ.. ದಿಲ್ಲಿಗೆ ಹೋದವರು ಮಾಜಿಯಾಗಿ ಬರ್ತಾರೆ ಎಂದ...

CONGRESS Vs BJP: ಸಿದ್ದು, ಡಿಕೆಶಿ ಕುರ್ಚಿ ಕದನ.. ದಿಲ್ಲಿಗೆ ಹೋದವರು ಮಾಜಿಯಾಗಿ ಬರ್ತಾರೆ ಎಂದ ಬಿಜೆಪಿ!

ಕರ್ನಾಟಕದ ಕುರ್ಚಿ ಕದನ ದೆಹಲಿಗೆ ಶಿಫ್ಟ್ ಆಗಿದೆ. ರಾಷ್ಟ್ರ ರಾಜಧಾನಿ ಸೇರಿರೋ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ತಮ್ಮ ತಮ್ಮ ದಾಳ ಉರುಳಿಸೋಕೆ ಸಜ್ಜಾಗಿದ್ದಾರೆ. ದೆಹಲಿ ನಾಯಕರನ್ನು ಇಬ್ಬರೂ ಪ್ರತ್ಯೇಕ ಭೇಟಿಗಾಗಿ ಮಾತುಕತೆ ನಡೆಸಿರೋದು ವಿಶೇಷ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸಮುದ್ರ ಮಂಥನ ನಡೆಸಿದ್ದಾರೆ. ನಾಯಕತ್ವ ಬದಲಾವಣೆ, ಪವರ್ ಶೇರಿಂಗ್ ಕುರಿತು ಚರ್ಚೆ ನಡೆದಿದೆ ಎನ್ನಾಲಾಗುತ್ತಿದೆ. ಅದರಲ್ಲೂ ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ಜೋರಾಗಿ ನಡೀತಿದೆ. ಸದ್ಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ರೂ ಒಳಗೊಳಗೆ ಗೊಂದಲದ ಗೂಡುಕಟ್ಟಿದೆ. ಕೆಲ ನಾಯಕರು ಬಹಿರಂಗವಾಗಿ ತಮ್ಮ ಅನಿಸಿಕೆಗಳಿಗೆ ಪದಪುಂಜ ಕಟ್ಟಿ ಸ್ವರ ಸೇರಿಸ್ತಿದ್ದಾರೆ. ಈ ಬಗ್ಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನ ಹೈಕಮಾಂಡ್ ಮುಂದಿಟ್ಟಿದ್ದಾರೆ.


ದೆಹಲಿಗೆ ಹೋದವರು ಮಾಜಿಯಾಗಿ ಬರಲಿದ್ದಾರೆ..!
ನಾಯಕತ್ವ ಬದಲಾವಣೆ ಚರ್ಚೆಗೆ ಸಿದ್ದು ತಿರುಗೇಟು ನೀಡಿದ್ದಾರೆ. ನಾನೇ 5 ವರ್ಷ ಪೂರ್ಣಾವಧಿ ಸಿಎಂ ಎಂದು ದಿಲ್ಲಿಯಲ್ಲಿ ಸಿದ್ದರಾಮಯ್ಯ ಗುಟುರು ಹಾಕಿದ್ದಾರೆ. ಆದರೆ, ಕರ್ನಾಟಕ ಬಿಜೆಪಿ ಒಂದು ಟ್ವೀಟ್ ಮಾಡಿ, ಸಿದ್ದರಾಮಯ್ಯರನ್ನು ಮೂದಲಿಸಿದೆ. ದೆಹಲಿಗೆ ಹೋದವರು ಮಾಜಿಯಾಗಿ ಬರಲಿದ್ದಾರೆ ಎಂದು ಭವಿಷ್ಯ ನುಡಿದಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!