Monday, April 21, 2025
Homeಬೆಂಗಳೂರುಅಮುಲ್ ವಿರುದ್ದ ತಿರುಗಿಬಿದ್ದ ಕಾಂಗ್ರೆಸ್

ಅಮುಲ್ ವಿರುದ್ದ ತಿರುಗಿಬಿದ್ದ ಕಾಂಗ್ರೆಸ್

ಬೆಂಗಳೂರು: ಅಮುಲ್ ಮತ್ತು ನಂದಿನಿ ನಡುವಿನ ಸಮರ ಈಗ ರಾಜಕೀಯ ವಲಯಕ್ಕೂ ಕಾಲೆಟ್ಟಿದೆ. ಬಿಜೆಪಿ ಚಿತಾವಣೆಯಿಂದಾಗಿ ಅಮುಲ್ ಸಂಸ್ಥೆ ರಾಜ್ಯದ ಹೈನು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಕುರಿತು ಸರಣಿ ಟ್ವೀಟ್‍ಗಳ ಮೂಲಕ ಟೀಕಿಸಿದೆ.
ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕುಯ್ಯಲು ಹೊರಟಿದೆ ಬಿಜೆಪಿ. ಅಮುಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದ್ದರು. ಕೆಎಂಎಫ್ ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿಸಿದರು. ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನನ್ನು ಸರ್ವನಾಶ ಮಾಡುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.
ಮತ್ತೊಂದು ಟ್ವೀಟ್ ನಲ್ಲಿ “ಕ್ರೋನಾಲಜಿ:” ಎಂಬ ಶೀರ್ಷಿಕೆಯಡಿ ಕಾಂಗ್ರೆಸ್, ಅಮುಲ್ + ನಂದಿನಿ ವಿಲೀನ ಎಂದರು. ಮೊಸರಿಗೆ ಹಿಂದಿಯ ದಹಿ ಇರಲೇಬೇಕು ಎಂದರು. ಕೆಎಂಎಫ್ ಹಾಲು ನೀಡುವ ರೈತರಿಗೆ 5-6 ತಿಂಗಳಿಂದ ಸಹಾಯಧನ ನಿಲ್ಲಿಸಿದರು, ಉದ್ದೇಶಪೂರ್ವಕವಾಗಿ ನಂದಿನಿ ಉತ್ಪನ್ನಗಳ ಕೊರತೆ ಸೃಷ್ಟಿಸಿದರು., ಈಗ ಅಮೂಲ್‍ನ್ನು ಕರ್ನಾಟಕಕ್ಕೆ ತಂದು ಬಿಟ್ಟರು, ನಂದಿನಿಯ ಕೆಚ್ಚಲು ಕುಯ್ಯುತ್ತಿದೆ ಬಿಜೆಪಿ ಎಂದು ಹೇಳಿದೆ.

ಹೆಚ್ಚಿನ ಸುದ್ದಿ

error: Content is protected !!