ನನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ (Congress MP) ಕಪಿಲ್ ಸಿಬಲ್ (Kapil Sibal) ವಾಗ್ದಾಳಿ ನಡೆಸಿದ್ದು, ಕೇವಲ ಚುನಾವಣೆಗಳ ಸಮಯದಲ್ಲಿಯೇ ಜಾರಿ ನಿರ್ದೇಶನಾಲಯ (ED) ಇತರೆ ಪಕ್ಷಗಳ ನಾಯಕರ ಮೇಲೆ ಏಕೆ ದಾಳಿ ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಜ.8 ರಂದು ಐ ಪ್ಯಾಕ್ ಸಂಸ್ಥೆಯ ಮೇಲೆ ಪಶ್ಚಿಮ ಬಂಗಾಳದಲ್ಲಿ ಇ.ಡಿ ನಡೆಸಿದ ದಾಳಿ ಹಿಂದಿನ ಉದ್ದೇಶ ಏನು ಎಂಬುದು ಈಗ ಬಹಿರಂಗವಾಗಿದೆ. ಕೇಂದ್ರ ಸರ್ಕಾರನ ಕೇವಲ ಪ್ರತಿಪಕ್ಷ ನಾಯಕರನ್ನು ಹಣಿಯಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದಿದ್ದಾರೆ. ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್, ಬಿಹಾರದಲ್ಲಿ ಲಾಲು ಪ್ರಸಾದ್, ತೇಜಸ್ವಿ ಯಾದವ್ ವಿರುದ್ಧ ನಡೆದ ದಾಳಿ ಕೂಡ ಇದಕ್ಕೆ ಸ್ಪಷ್ಟ ಯಾದಹರಣೆ ಎಂದಿದ್ದಾರೆ.
ಹೀಗಾಗಿ ಸ್ವತಂತ್ರ ತನಿಖಾ ಸಂಸ್ಥೆಗಳು ಎಂದು ಕರೆಸಿಕೊಳ್ಳುವ ಈ ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಬಗ್ಗೆ ಪ್ರಶ್ನಿಸಲಾದ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಅನ್ನು ಕಪಿಲ್ ಸಿಬಲ್ ಕೋರಿದ್ದಾರೆ.
ಸಂಸದ ಕಪಿಲ್ ಸಿಬಲ್ ಕಟುವಾದ ಪದಗಳಲ್ಲಿ ಈ ನಡೆಯನ್ನು ಟೀಕಿಸಿದ್ದು, ಇ.ಡಿ ದೇವರಂತೆ ಸರ್ವವ್ಯಾಪಿ. ಇ.ಡಿ ಕೇಂದ್ರ ಬಿಜೆಪಿ ಸರ್ಕಾರದ ದೇವರು. ಹೀಗಾಗಿ ಅವರು ಏನು ಬೇಕಾದರೂ ಮಾಡಬಹುದು. ಸಿಬಿಐ ಕೂಡ ಇದೇ ರೀತಿ ವರ್ತಿಸುತ್ತದೆ ಎಂದು ಕಪಿಲ್ ಸಿಬಲ್ ಟೀಕಿಸಿದ್ದಾರೆ.