ಬಿಜೆಪಿಯವರು ಎಟಿಎಂ ಹಣತುಂಬುವ ವಾಹನ, ಆಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳ ಮೂಲಕ ಹಣ ಸಾಗಿಸುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಶುಕ್ರವಾರ ಜಂಟಿ ಸುದ್ದಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಸಮಯದಲ್ಲಿ ಬಿಜೆಪಿಯವರು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಐಟಿ ಅಧಿಕಾರಿಗಳಿಗೆ ಅಮಿತ್ ಶಾ ನಿರ್ದೇಶನವಿದೆ. ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಯ ಸಂದರ್ಭಧಲ್ಲಿ ಬಿಜೆಪಿ ಪಕ್ಷ ಎಟಿಎಂಗಳಿಗೆ ಹಣ ತುಂಬುವ ವಾಹನ, ಆಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ನಡೆಸಿದೆ ಎಮದು ಕೆಪಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.
ಕೆಪಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಮಾತನಾಡಿ, ಯಡಿಯೂರಪ್ಪವರಿಗೆ ಬಿಜೆಪಿ ಹೈಕಮ್ಯಾಂಡ್ ಬ್ಲಾಕ್‍ಮೇಲ್ ಮಾಡುತ್ತಿದ್ದು, ಒತ್ತಡದ ಮೂಲಕ ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದ ಟಿಕೆಟ್ ನೀಡುವ ಮೂಲಕ್ ಬಲಿಪಶು ಮಾಡಲಾಗುತ್ತಿದೆ. ಯಡಿಯೂರಪ್ಪ ಕಣ್ಣೀರು ಸುರಿಸಿ ರಾಜೀನಾಮೆ ಕೊಟ್ಟ ಬಳಿP ವ್ಯವಸ್ಥಿತವಾಗಿ ಅವರನ್ನು ನಿರಾಶ್ರಿತಧಾಮಕ್ಕೆ ಕಳಿಸಲು ಯೋಜನೆ ನಡೆಸಿತು. ಅದೇರೀತಿ ವಿಜಯೇಂದ್ರ ವಿರುದ್ಧ ಗಂಭೀರವಾದ 5-6 ಪ್ರಕರಣಗಳಿದ್ದು, ವರುಣಾದಲ್ಲಿ ನಿಂತರೆ ಅದನ್ನು ಖುಲಾಸೆಗೊಳಿಸುವುದಾಗಿ ಬಿಜೆಪಿ ಹೈಕಮ್ಯಾಂಡ್ ಹೇಳಿದೆ. ಇಳಿವಯಸಿನ ಯಡಿಯೂರಪ್ಪನವರ ಮೇಲೆ ಬೆದರಿಕೆ ಹಾಕಿ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜೊತೆಗೆ ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ರಮೇಶ್ ಬಾಬು, ಕುಮಾರಸ್ವಾಮಿ ಬಿಜೆಪಿ ಬಿ.ಟೀಮ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಟೀಕಿಸಿದರು.