Thursday, April 16, 2026
Homeಟಾಪ್ ನ್ಯೂಸ್CONGRESS : ದಾವಣಗೆರೆ ದಕ್ಷಿಣ ಟಿಕೆಟ್‌ ಗೆ ಸಚಿವರ ನಡುವೆ ಫೈಟ್‌ - ಇಬ್ಬರನ್ನೂ ಕೂರಿಸಿಕೊಂಡು...

CONGRESS : ದಾವಣಗೆರೆ ದಕ್ಷಿಣ ಟಿಕೆಟ್‌ ಗೆ ಸಚಿವರ ನಡುವೆ ಫೈಟ್‌ – ಇಬ್ಬರನ್ನೂ ಕೂರಿಸಿಕೊಂಡು ಸಂಧಾನಕ್ಕೆ ಯತ್ನಿಸಿದ ಸಿಎಂ!

ಬೆಂಗಳೂರು : ಕಾಂಗ್ರೆಸ್ (Congress ) ಸರ್ಕಾರದಲ್ಲಿ ಇಬ್ಬರು ಸಚಿವರ (Minister ) ನಡುವೆ ಜಟಾಪಟಿ ಜೋರಿದ್ದು, ಖುದ್ದು ಸಿಎಂ ಸಿದ್ದರಾಮಯ್ಯ (Cm siddaramaiah ) ರಾಜೀ ಸಂಧಾನ ಮಾಡಿದ್ದಾರೆ.

ಇಬ್ಬರು ಸಚಿವರನ್ನು ಅಕ್ಕಪಕ್ಕ ಕೂರಿಸಿಕೊಂಡು ಹೈಕಮಾಂಡ್ ಹೇಳಿದಂತೆ ಕೇಳೋಣ ಎಂದು ಸಮಾಧಾನ ಮಾಡಿದ್ದಾರೆ. ಡಿ.ಕೆ.ಶಿವಕುಮಾ‌ರ್ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರಿಗೆ ಔತಣಕೂಟ ಆಯೋಜಿಸಲಾಗಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಔತಣ ಕೂಟಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಸಚಿವರ ಜೊತೆ ಸಂಧಾನ ನಡೆಸಿದ್ದಾರೆ.

ಸಿದ್ದರಾಮಯ್ಯ ಆಪ್ತರಾದ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ನಡುವೆ ಶೀತಲ ಸಮರ ನಡೆದಿತ್ತು.10 ನಿಮಿಷಕ್ಕೂ ಹೆಚ್ಚು ಕಾಲ ಇಬ್ಬರನ್ನು ಕೂರಿಸಿಕೊಂಡು ಸಿದ್ದು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಶಾಮನೂರು ಶಿವಶಂಕರಪ್ಪ ನಿಧನದ ಕಾರಣಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಮುಸ್ಲಿಂ ಅಭ್ಯರ್ಥಿಗೆ ನೀಡಬೇಕು ಎಂದು ಸಚಿವ ಜಮೀ‌ರ್ ಅಹ್ಮದ್ ಖಾನ್ ಪಟ್ಟು ಹಿಡಿದಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ವೈ ಮನಸ್ಸು ಉದ್ಭವವಾಗಿತ್ತು.

ಇದನ್ನೂ ಓದಿ : ಪೆಟ್ರೋಲ್‌, ಡೀಸೆಲ್‌ ಮಾತ್ರವಲ್ಲ ಖಾದ್ಯ ತೈಲವೂ ದುಬಾರಿ – ಅಡುಗೆ ಎಣ್ಣೆಗಳ ಬೆಲೆ ಏಕಾಏಕಿ ಜಂಪ್‌! 

ಹೆಚ್ಚಿನ ಸುದ್ದಿ

Change Language »
error: Content is protected !!