Sunday, January 19, 2025
Homeಟಾಪ್ ನ್ಯೂಸ್ಕಾಂಗ್ರೆಸ್ ತಿರುಕನ ಕನಸು ಕಾಣ್ತಿದೆ: ಬಿ.ಎಸ್‌ ಯಡಿಯೂರಪ್ಪ

ಕಾಂಗ್ರೆಸ್ ತಿರುಕನ ಕನಸು ಕಾಣ್ತಿದೆ: ಬಿ.ಎಸ್‌ ಯಡಿಯೂರಪ್ಪ

ಬೆಂಗಳೂರು: ಈ ಬಾರಿ ಏನೇ ಪ್ರಯತ್ನ ಮಾಡಿದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಕಷ್ಟಸಾಧ್ಯ, ಕಾಂಗ್ರೆಸ್ ತಿರುಕನ ಕನಸು ಕಾಣ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ನರೇಂದ್ರ ಮೋದಿ ಸರ್ಕಾರದ ಜನಪರ ಯೋಜನಗೆಳು ಬಿಜೆಪಿಯಗೆ ಸ್ಪಷ್ಟ ಬಹುಮತ ತಂದುಕೊಡಲಿದೆ. ಈಗಾಗಲೇ ವಿಯಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ರಾಜ್ಯದ ಮೂಲೆ ಮೂಲೆಗೂ ತಲುಪಿದೆ. ಅದಲ್ಲದೇ ಇನ್ನೆರಡು ದಿನಗಳಲ್ಲಿ ತಾವೇ ರಾಜ್ಯ ಪ್ರವಾಸ ಕೈಗೊಂಡು ಜನರ ಮನೆ ಮನ ತಲುಪುತ್ತೇವೆ ಎಂದ್ರು

ಬಿಜೆಪಿ ಗೆ ಸ್ಪಷ್ಟ ಬಹುಮತ

ಈ ಬಾರಿ ಬಿಜೆಪಿಗೆ ಜನಾಶೀರ್ವಾದ ದೊರೆಯಲಿದ್ದು ಬಿಜೆಪಿ ಮಾಡಿರುವ ಸರ್ವೆಗಳೂ ಅದನ್ನೇ ಹೇಳಿದೆ. ಸದ್ಯದಲ್ಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ

ಭಾರತದ ಅಭಿವೃಧ್ಧಿ ಶಕೆ ಆರಂಭಗೊಂಡಿದ್ದೇ 2014 ರಿಂದ, ಯಾರೇನೇ ಅಂದರೂ ಈ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ, ಯಾರಿಗೂ ಅನುಮಾನ ಬೇಡ. ಮೂಲೆಗುಂಪು ಆಗಿರುವ ಬೇರೆ ಪಕ್ಷದವರನ್ನು ನಾನೇ ನೆನಪು ಯಾಕೆ ಮಾಡಿಕೊಳ್ಳಲಿ ಅಂತ ಅವರ ಬಗ್ಗೆ ಮಾತಾಡಿರಲಿಲ್ಲ ಎಂದು ಬಿಎಸ್‌ವೈ ಹೇಳಿದ್ದಾರೆ.

ಚುನಾವಣಾ ಸಮೀಕ್ಷೆ ಕಾಂಗ್ರೆಸ್‌ ಪರ ಬಂದಿರುವುದನ್ನು ಉಲ್ಲೇಖಿಸಿದ ಬಿಎಸ್‌ವೈ, “ನಾನು 50 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ, ಜನರ ನಾಡಿ ಮಿಡಿತ ಗೊತ್ತಿದೆ, ಬಿಜೆಪಿ ಸಂಪೂರ್ಣ ಬಹುಮತದಿಂದ ಬರುತ್ತದೆ ಎಂದು ನಮ್ಮ ಮೂರು ಸರ್ವೆಗಳ ರಿಪೋರ್ಟ್‌ ಬಂದಿದೆ” ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!