Sunday, November 3, 2024
Homeಚುನಾವಣೆ 2023ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವಮೂರ್ತಿ ಪ್ರಚಾರ ಆರಂಭ

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವಮೂರ್ತಿ ಪ್ರಚಾರ ಆರಂಭ

ಬೆಂಗಳೂರು: ಇಂದು ಬೆಳಿಗ್ಗೆಯಷ್ಟೇ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಕೇಶವಮೂರ್ತಿ ಜೆ.ಸಿನಗರ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರ ಆರಂಭಿಸಿದರು.

ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಕೇಶವಮೂರ್ತಿ ವಿಧಾನಸೌಧ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಇಂದು ಜೆ.ಸಿನಗರ ಸುತ್ತಮುತ್ತಲ ಪ್ರದೇಶದಲ್ಲಿ ಮನೆ,ಮನೆಗೆ ತೆರಳಿ ಕರಪತ್ರ ನೀಡಿ ಪ್ರಚಾರಕಾರ್ಯ ಆರಂಭಿಸಿದ ಕೇಶವಮೂರ್ತಿ ಪಕ್ಷ ನನ್ನನು ಗುರುತಿಸಿ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಅದಕ್ಕೆ ನಾನು ಆಭಾರಿ ಎಂದ್ರು

ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ ಮತ್ತು ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಮತದಾರ ಬಹಳ ಪ್ರಜ್ಞಾವಂತ ಸರಳ ವ್ಯಕ್ತಿತ್ವ ಇರುವವರಿಗೆ ಮಾನ್ಯತೆ ನೀಡುತ್ತಾರೆ ಎಂದು ನಂಬಿದ್ದೇನೆ ಎಂದರು.

ಈ ವೇಳೆ ಕೇಶವಮೂರ್ತಿಯವರ ಬಹುಕಾಲದ ಒಡನಾಡಿ ಎಂ.ಶಿವರಾಜು ಕೂಡಾ ಅವರ ಜೊತೆಗಿದ್ದು ಪ್ರಚಾರಕಾರ್ಯ ಕೈಗೊಂಡರು

ಹೆಚ್ಚಿನ ಸುದ್ದಿ

error: Content is protected !!