ಕೊಪ್ಪಳ: ಕೊಪ್ಪಳದ ಚುನಾವಣಾ ಕಣದಲ್ಲಿ ಈಗ ಮಾತಿನ ವಾರ್ ಶುರುವಾಗಿದೆ. ಗಂಗಾವತಿ ಜನ ಫುಟ್ಬಾಲ್ ಆಡಿದ್ರೆ ಸೀದಾ ಬಳ್ಳಾರಿಗೆ ಹೋಗಿ ಬೀಳುತ್ತಾರೆ ಎಂದು ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಬಗ್ಗೆ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ವ್ಯಂಗ್ಯವಾಡಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನ್ಸಾರಿ, ಜನಾರ್ದನ ರೆಡ್ಡಿಗೆ ಅವರ ಪಕ್ಷದ ಚಿನ್ಹೆ ಸೂಕ್ತವಾಗಿದೆ. ಗಂಗಾವತಿ ಜನ ಇಲ್ಲಿ ಫುಟ್ಬಾಲ್ ಆಡಿದರೆ ಸೀದಾ ಬಳ್ಳಾರಿಗೆ ಹೋಗಿ ಬೀಳ್ತಾರೆ ಎಂದು ಟೀಕಿಸಿದರು
ಬಳ್ಳಾರಿಯಲ್ಲಿ ಏನು ಮಾಡಲಾರದೆ ರೆಡ್ಡಿ ಗಂಗಾವತಿಗೆ ಬಂದಿದ್ದಾರೆ. ಇಲ್ಲಿ ಅದೇನ್ ಕಡೆದು ಕಟ್ಟೆ ಹಾಕ್ತಾರೋ. ಜನಾರ್ದನ ರೆಡ್ಡಿ ಇಲ್ಲಿ ಚುನಾವಣೆಗೆ ಬಂದಿದ್ದಾರೆ ಅಷ್ಟೆ. ಚುನಾವಣೆ ಮುಗಿದ ನಂತರ ಅವತ್ತೇ ಸಂಜೆ ಅವರು ವಾಪಸ್ ಹೋಗಬೇಕಾಗುತ್ತೆ ಎಂದ್ರು.