ನವದೆಹಲಿ: ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪಕ್ಷದ ನಾಯಕತ್ವಕ್ಕೆ ಸಂಸದ ಮನೀಶ್ ತಿವಾರಿ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ತಿವಾರಿಯವರು ಈಗಾಗಲೇ ನೋಟಿಸ್ ಸಿದ್ಧಪಡಿಸಿ, ಪಕ್ಷಕ್ಕೆ ನೀಡಿದ್ದು, ಇದರ ಮುಂದಿನ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಯಾಕೆಂದರೆ ಈ ಬೆಳವಣಿಗೆಯಲ್ಲಿ ಬೇರೆ ವಿರೋಧಪಕ್ಷಗಳು ಜೊತೆಗೆ ನಿಲ್ಲಬಹುದೇ ಎನ್ನುವ ಬಗ್ಗೆ ಕಾಂಗ್ರೆಸ್ ಗೂ ಗೊಂದಲವಿದೆ ಎನ್ನಲಾಗಿದೆ.