Saturday, January 25, 2025
Homeಟಾಪ್ ನ್ಯೂಸ್ಲಕ್ಷ್ಮಿ ಪೆಂಡೆಂಟ್‌ ನೆಕ್ಲೆಸ್‌ ಧರಿಸಿ ಸಂಕಷ್ಟಕ್ಕೀಡಾದ ತಾಪ್ಸಿ ಪನ್ನು

ಲಕ್ಷ್ಮಿ ಪೆಂಡೆಂಟ್‌ ನೆಕ್ಲೆಸ್‌ ಧರಿಸಿ ಸಂಕಷ್ಟಕ್ಕೀಡಾದ ತಾಪ್ಸಿ ಪನ್ನು

ಫ್ಯಾಶನ್ ಶೋ ಒಂದರಲ್ಲಿ ಲಕ್ಷ್ಮಿ ಚಿತ್ರವಿರುವ ಆಭರಣ ಹಾಕಿ ರ್ಯಾಂಪ್‌ ವಾಕ್‌ ಮಾಡಿದಕ್ಕೆ ನಟಿ ತಾಪ್ಸಿ ಪನ್ನುಗೆ ಸಂಕಷ್ಟ ಎದುರಾಗಿದೆ.

ಹಿಂದೂ ದೇವಿಗೆ ನಟಿ ಅವಮಾನಿಸಿದ್ದಾರೆ ಎಂದು ನಟಿಯ ವಿರುದ್ಧ ಮಧ್ಯಪ್ರದೇಶದ ಬಿಜೆಪಿ ಶಾಸಕಿ ಮಾಲಿನಿ ಗೌರ್ ಪುತ್ರ, ಹಿಂದ್ ರಕ್ಷಕ್ ಸಂಘಟನೆಯ ಸಂಚಾಲಕ ಏಕಲವ್ಯ ಗೌರ್ ಛತ್ರಿಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಾಪ್ಸಿ ಅವರಿಗೆ ನೋಟಿಸ್ ಕಳಿಸಿದ್ದಾರೆ.

ಮಾರ್ಚ್ 12 ರಂದು ಮುಂಬೈಯಲ್ಲಿ ಆಯೋಜಿಸಿದ್ದ ಫ್ಯಾಶನ್ ಶೋನಲ್ಲಿ ತಾಪ್ಸಿ ಅವರು ಲಕ್ಷ್ಮಿದೇವಿಯ ದೊಡ್ಡ ಪೆಂಡೆಂಟ್‌ ಇರುವ ನೆಕ್‌ಲೆಸ್‌ ಅನ್ನು ಧರಿಸಿ ಪ್ರದರ್ಶನ ನೀಡಿದ್ದರು. ನಟಿ ತಮ್ಮ ಎದೆ ಕಾಣುವ ಹಾಗಿನ ವಸ್ತ್ರ ಧರಿಸಿ, ದೇವಿಯ ಮಾಲೆ ಹಾಕಿರುವುದು ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗಿದೆ ಎಂದು ಹಿಂದುತ್ವವಾದಿಗಳು ಆಕ್ಷೇಪ ಎತ್ತಿದ ಬಳಿಕ ಈ ದೂರು ದಾಖಲಾಗಿದೆ.

 ತಮ್ಮ ರಾಜಕೀಯ ನಿಲುವುಗಳಿಗಾಗಿ ಹಲವು ಬಾರಿ ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ತಾಪ್ಸಿ ಪನ್ನುವಿನ ಮೇಲಿನ ಈ ಪ್ರಕರಣವು ರಾಜಕೀಯ ದುರುದ್ಧೇಶದಿಂದ ಕೂಡಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.

ಹೆಚ್ಚಿನ ಸುದ್ದಿ

error: Content is protected !!