Saturday, January 25, 2025
Homeಟಾಪ್ ನ್ಯೂಸ್ಮಸೀದಿ ಎದುರು ಡಿಜೆ ಮೆರವಣಿಗೆ: ಎರಡು ಗುಂಪುಗಳ ನಡುವೆ ಘರ್ಷಣೆ

ಮಸೀದಿ ಎದುರು ಡಿಜೆ ಮೆರವಣಿಗೆ: ಎರಡು ಗುಂಪುಗಳ ನಡುವೆ ಘರ್ಷಣೆ

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಾಲ್ಧಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರು, ಮಸೀದಿಯ ಎದುರಿನಿಂದ ಬಂದ ಡಿಜೆ ಮೆರವಣಿಗೆಯನ್ನು ತಡೆದ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಮಂಗಳವಾರ ರಾತ್ರಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿ 45 ಜನರನ್ನು ಬಂಧಿಸಿದ್ದಾರೆ.

ಘರ್ಷಣೆಯಲ್ಲಿ ಹಲವಾರು ವಾಹನಗಳಿಗೆ ಹಾನಿಯಾಗಿದ್ದು, ಹಿಂಸಾಚಾರದಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ಶಾಂತಿಯುತವಾಗಿ, ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

‘ದಿಂಡಿ’ ಯಾತ್ರೆಯು ಮಸೀದಿ ಮುಂದೆ ಸಾಗುವಾಗ ಡಿಜೆ ಹಾಕದಂತೆ ಒಂದು ಕೋಮಿನವರು ಕೇಳಿಕೊಂಡಿದ್ದು, ಡಿಜೆ ಬಗೆಗಿನ ವಾದ ವಿವಾದವು ಕಲ್ಲು ತೂರಾಟಕ್ಕೆ ಕಾರಣವಾಗಿದೆ.

ಮೆರವಣಿಗೆಯಲ್ಲಿದ್ದವರು ಮುಸ್ಲಿಮರ ಮನೆಗಳನ್ನು ಲೂಟಿ ಮಾಡಿ, ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ ಎಂದು indianexpress ವರದಿ ಮಾಡಿದೆ.

ಹೆಚ್ಚಿನ ಸುದ್ದಿ

error: Content is protected !!