ಬೆಂಗಳೂರು: ಕನ್ನಡದಲ್ಲಿ ಮನರಂಜನೆ ಎಂದಾಕ್ಷಣ ಕಲರ್ಸ್ ಕನ್ನಡ ಚಾನೆಲ್ ಮುಂಚೂಣಿಯಲ್ಲಿರುತ್ತದೆ. ವಾರದ ದಿನಗಳಲ್ಲಿ ಧಾರಾವಾಹಿ ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಮನರಂಜನೆ ನೀಡುತ್ತಿದೆ. ಚಾನೆಲ್ ಇಷ್ಟು ಹೆಸರು ಗಳಿಸಲು ಕಾರಣ ಚಾನೆಲ್ ಬ್ಯುಸಿನೆಸ್ ಹೆಡ್ ಆಗಿದ್ದ ಪರಮೇಶ್ವರ್ ಗುಂಡ್ಕಲ್ ಅವರ ಶ್ರಮ, ಕ್ರಿಯಾಶೀಲತೆ ಮುಖ್ಯ ಕಾರಣ. ಆದರೆ ಈ ಎಲ್ಲಾ ಜವಾಬ್ದಾರಿಗಳಿಂದ ಹೊರ ಬರುತ್ತಿರುವ ಪರಮೇಶ್ವರ್ ಅವರು ಕಲರ್ಸ್ ಕನ್ನಡ ಚಾನೆಲ್‌ಗೆ ವಿದಾಯ ಹೇಳಿದ್ದಾರೆ.
ವಿದಾಯದ ಕುರಿತಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಒಂದು ದಿನ ಅದೇ ಕಂಪನಿಯ ಕಲರ್ಸ್ ಚಾನೆಲ್ ಅನ್ನು ಕನ್ನಡದಲ್ಲಿ ರೂಪಿಸುವ ಅವಕಾಶ ಸಿಕ್ಕಿಬಿಟ್ಟದ್ದು ಮಾತ್ರ ಬಹುಶಃ ಅದೃಷ್ಟ. ಅಷ್ಟೇ ಅನಿರೀಕ್ಷಿತ ಎಂದು ಹೇಳಿರುವ ಅವರು ಗುಡ್ ಬೈ ಅಂದಿದ್ದಾರೆ.