ಬೆಂಗಳೂರು: ಸಿಎನ್ ಜಿ ಹಾಗೂ ಪಿಎನ್ ಜಿ ಅನಿಲ ದರ 7ರೂ. ಇಳಿಕೆಯಾಗಿದೆ. ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 7ರೂ. ಇಳಿಕೆಯಾಗಿದ್ದು, ಉಳಿದ ಜಿಲ್ಲೆಗಳಲ್ಲಿ 6 ರೂ. ಇಳಿಕೆ ಕಂಡಿದೆ.
ವರ್ಷಕ್ಕೆ ಎರಡು ಬಾರಿ ಈ ದರ ಪರಿಷ್ಕರಣೆ ಮಾಡಲಾಗುತ್ತದೆ. ಇನ್ಮುಂದೆ ಮಾಸಿಕ ದರ ಪರಿಷ್ಕರಣೆಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಸಿಎನ್‌ಜಿ ಹಾಗೂ ಕೊಳವೆ ಮೂಲಕ ಮನೆಗಳಿಗೆ ತಲುಪಿಸುವ ಅಡುಗೆ ಅನಿಲಕ್ಕೆ (ಪಿಎನ್ಜಿ) ಮಾತ್ರ ಈ ದರ ಇಳಿಕೆ ಅನ್ವಯವಾಗಲಿದೆ. ದೆಹಲಿಯಲ್ಲಿ ಕೆಜಿಗೆ 6 ರೂ. ಇಳಿಕೆಯಾಗಿದೆ. ಇದು ಎರಡು ವರ್ಷಗಳಲ್ಲಿ ಮೊದಲ ಇಳಿಕೆಯಾಗಿದೆ. ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಯು 8.13 ರೂಪಾಯಿಗಳಷ್ಟು ಇಳಿಕೆ ಮಾಡಿದ್ದು, ಶನಿವಾರದಿಂದ ಜಾರಿಗೆ ಬಂದಿದೆ. ಪೈಪ್ಡ್ ನೈಸರ್ಗಿಕ ಅನಿಲದ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (ಎಸ್‌ಸಿಎಂ) 5.06 ರಷ್ಟು ಕಡಿಮೆ ಮಾಡಿದೆ.
ದೇಶೀಯ ನೈಸರ್ಗಿಕ ಅನಿಲ ಬೆಲೆಗಳ ಪರಿಷ್ಕರಣೆ ಏಪ್ರಿಲ್ 8 ರಿಂದ ಜಾರಿಗೆ ಬಂದಿದೆ. ಸಿಎನ್‌ಜಿ ಮತ್ತು ಪಿಎನ್‌ಜಿಯಲ್ಲಿ ಕಂಪನಿಯ ಹೆಚ್ಚಿನ ಬೆಲೆ ಪರಿಷ್ಕರಣೆ ಏಪ್ರಿಲ್ 9 ರಿಂದ ಜಾರಿಗೆ ಬಂದಿದೆ. ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೋಲಿಸಿದರೆ ಅದರ ಸಿಎನ್‌ಜಿ ಈಗ ಸುಮಾರು ಶೇ. 49 ಮತ್ತು ಶೇ.16 ರಷ್ಟು ಕಡಿಮೆಯಾಗಿದೆ. ಸರ್ಕಾರದ ಈ ಕ್ರಮ ದೇಶೀಯ ಮತ್ತು ಸಾರಿಗೆ ವಿಭಾಗದಲ್ಲಿ ನೈಸರ್ಗಿಕ ಅನಿಲದ ಬಳಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.