ಬೆಂಗಳೂರು : ಸಿಎಂ ಸಿದ್ದರಾಮಯ್ಯನವರು ಸ್ವಾಭಿಮಾನದ ಹೆಸರಲ್ಲಿ ಸಮಾವೇಶ ನಡೆಸಲು ಹೊರಟರೆ ಡಿಕೆ ಶಿವಕುಮಾರ್ ಅದರ ದಾರಿಯನ್ನೇ ತಿರುಗಿಸಿ ಬೀಗುತ್ತಿದ್ದಾರೆ. ಶಕ್ತಿ ಪ್ರದರ್ಶನದ ವೇದಿಕೆ ಕಾಂಗ್ರೆಸ್ ವೇದಿಕೆಯಾಗಿದ್ದರಿಂದ ಸಿದ್ದರಾಮಯ್ಯ ಕೊತಕೊತ ಕುದಿಯುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿತ್ತು.
ಈ ಕುರಿತು ಖಾರವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ನಿಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣ ಬಿಟ್ಟು ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಚಿಲ್ಲರೆ ಬುದ್ದಿ ಮೊದಲು ಬಿಡಿ ಎಂದು ಬಿಜೆಪಿಗೆ ತಿರುಗೇಟು ನೀಡಿದೆ. ಮೂರು ಹೋಳಾಗಿರುವ ನಿಮ್ಮ ಪಕ್ಷದ ಬಣಗಳ ಬೀದಿ ಜಗಳ ಬಿಡಿಸಲು ಆಗದೆ ಕಾಂಗ್ರೆಸ್ ಸಮಾವೇಶದ ಬಗ್ಗೆ ಹೊಟ್ಟೆಗೆ ಕಿಚ್ಚು ಹತ್ತಿಸಿಕೊಂಡು ಕೊಂಕು ನುಡಿಯುತ್ತಿದ್ದೀರ ಎಂದು ಜಾಡಿಸಿದೆ.
ನಿಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣ ಬಿಟ್ಟು ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಚಿಲ್ಲರೆ ಬುದ್ದಿ ಮೊದಲು ಬಿಡಿ @BJP4Karnataka!
ಮೂರು ಹೋಳಾಗಿರುವ ನಿಮ್ಮ ಪಕ್ಷದ ಬಣಗಳ ಬೀದಿ ಜಗಳ ಬಿಡಿಸಲು ಆಗದೆ ಕಾಂಗ್ರೆಸ್ ಸಮಾವೇಶದ ಬಗ್ಗೆ ಹೊಟ್ಟೆಗೆ ಕಿಚ್ಚು ಹತ್ತಿಸಿಕೊಂಡು ಕೊಂಕು ನುಡಿಯುತ್ತಿದ್ದೀರ.
ಸಂಘಟಿತ ನಾಯಕತ್ವದಲ್ಲಿ ಜನಾದೇಶ ಪಡೆದು ಜನಪರ… https://t.co/R6FKk4lFvS
— Karnataka Congress (@INCKarnataka) December 2, 2024
ಸಂಘಟಿತ ನಾಯಕತ್ವದಲ್ಲಿ ಜನಾದೇಶ ಪಡೆದು ಜನಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ, ಬೆಂಬಲ ನೀಡಿದ ಸಮಾನ ಮನಸ್ಕ ಸಂಘಟನೆಗಳಿಗೆ ಧನ್ಯವಾದ ಅರ್ಪಿಸಲು ‘ಜನಕಲ್ಯಾಣ ಸಮಾವೇಶ’ ನಡೆಸುತ್ತಿದೆ ಎಂದು ಕೈಪಡೆ ಹೇಳಿದೆ.