Wednesday, December 4, 2024
Homeಟಾಪ್ ನ್ಯೂಸ್BENGALURU HABBA : ಬೆಂಗಳೂರಲ್ಲಿ ಮೇಳೈಸಲಿದೆ "ನಮ್ಮ ಜಾತ್ರೆ" : ಬನ್ನಿ.. ಮಸ್ತ್‌ ಮಜಾ ಮಾಡಿ...

BENGALURU HABBA : ಬೆಂಗಳೂರಲ್ಲಿ ಮೇಳೈಸಲಿದೆ “ನಮ್ಮ ಜಾತ್ರೆ” : ಬನ್ನಿ.. ಮಸ್ತ್‌ ಮಜಾ ಮಾಡಿ !

ಬೆಂಗಳೂರು : ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಈ ಬಾರಿ ಬಹುನಿರೀಕ್ಷಿತ ಬಿಎಲ್‌ಆರ್‌ ಹಬ್ಬವನ್ನು ಆಯೋಜನೆ ಮಾಡಿದ್ದು, ನವೆಂಬರ್‌ 30 ರಿಂದ ಈ ಸಂಭ್ರಮ ಆರಂಭವಾಗಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಮ್ಮ ಜಾತ್ರೆ ಉದ್ಘಾಟನೆ ಮೂಲಕ ಅದ್ಧೂರಿ ಚಾಲನೆ ಸಿಗಲಿದೆ.

ನವೆಂಬರ್‌ 30ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಹಬ್ಬ ನಮ್ಮ ಕರ್ನಾಟಕ ರಾಜ್ಯದ ಶ್ರೀಮಂತ ಪರಂಪರೆ ಮತ್ತು ಕಲೆಯನ್ನು ಸಾರುವ ವೇದಿಕೆ ಆಗಿರಲಿದೆ.

ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮೆರವಣಿಗೆ ವೇಳೆ ಪ್ರರ್ಶಿಸಲಾಗುತ್ತದೆ. ಮೆರವಣಿಗೆಯ ಉದ್ದಕ್ಕೂ ನೃತ್ಯಗಾರರು, ಗಾಯಕರು, ಎತ್ತಿನ ಬಂಡಿಗಳು ಮತ್ತು ಹೂವಿನ ಪಲ್ಲಕ್ಕಿಕ್ಕೆ ಸಾಗಲಿದೆ. ಈ ಮೆರವಣಿಗೆಯ ಮತ್ತೊಂದು ವಿಶೇಷ, ಕರ್ನಾಟಕದ 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಅರ್ಪಿಸಲಾಗುವುದು.

ಇನ್ನು ಈ ಅನ್‌ಬಾಕ್ಸಿಂಗ್‌ಬಿಎಲ್‌ಆರ್‌ ಫೌಂಡೇಶನ್ ಸಿಇಒ ಮಾಲಿನಿ ಗೋಯಲ್‌ ಮಾತನಾಡಿ, ಬಿಎಲ್‌ಆರ್ ಹಬ್ಬದ ಮೂಲಕ, ರಾಜ್ಯದ ಪರಂಪರೆ, ಶ್ರೀಮಂತ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ನಾಗರಿಕರಿಗೆ ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಮ್ಮ ಜಾತ್ರೆ ನಡೆಸುತ್ತಿರುವುದು ಇದಕ್ಕೆ ಇನ್ನಷ್ಟು ಪ್ರೋತ್ಸಹ ನೀಡಿದಂತೆ ಎಂದರು.

ಹೆಚ್ಚಿನ ಸುದ್ದಿ

error: Content is protected !!