ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಡಾ. ಪುನೀತ್ ರಾಜ್‍ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು. ಅತ್ಯಾಧುನಿಕ ಸೌಲಭ್ಯಗಳು ಹಾಗೂ 40 ಹಾಸಿಗೆಗಳ ಶಿಶುಗಳ ಆರೈಕೆ ಕೇಂದ್ರವನ್ನು ಈ ಆಸ್ಪತ್ರೆ ಹೊಂದಿದ್ದು, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ನಿರ್ಮಿಸಲಾಗಿದೆ.
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್, ಇದನ್ನು ಆಸ್ಪತ್ರೆ ಎಂದು ಭಾವಿಸಬೇಡಿ. ದೇವಸ್ಥಾನವೆಂದು ಭಾವಿಸಿ ಎಂದರು. ಪುನೀತ್ ಬಗ್ಗೆ ಮಾತನಾಡುತ್ತಾ ಆತನಿಗೆ ಅಣ್ಣನಾಗಿ ಇದ್ದೆ ಎಂಬುದೇ ನನಗೆ ಹೆಮ್ಮಯೆ ವಿಷಯ ಎಂದರು. ಜೊತೆಗೆ ಸಾಧನೆ ಮಾಡಿ ಸತ್ತರೆ ಜನರ ಮನಸಿನಲ್ಲಿ ನಿಲ್ಲುತ್ತಾರೆ. ಹಾಗಾಗಿ ಅಭಿಮಾನಿ ದೇವರುಗಳಿಗೆ ಸಾಷ್ಟಾಂಗ ನಮಸ್ಕಾರ ಎಂದರು.
ಈ ವೇಳೆ ವಸತಿ ಸಚಿವ ಸೋಮಣ್ಣ, ಆರೋಗ್ಯ ಸಚಿವ ಕೆ. ಸುಧಾಕರ್, ಲೋಕಸಭಾ ಸದಸ್ಯ ಮುನಿಸ್ವಾಮಿ, ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.