“ಬೊಮ್ಮಣ್ಣ ನಿಮ್ಮಪ್ಪ ನಮ್ ಜೊತೆಲ್ಲಿದ್ರಣ್ಣ. ಜಾತಿ ಜಾತಿಗಳ ನಡುವೆ ಯಾಕೆ ತಂದಿಡೋ ಕೆಲಸ ಮಾಡ್ತೀಯಾ?..“
ಇದು ಮೀಸಲಾತಿ ಬದಲಾವಣೆ ವಿಚಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ವ್ಯಂಗ್ಯವಾಡಿದ ಪರಿ.
ಪಂಚರತ್ನ ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಇಬ್ರಾಹಿಂ, “ಮುಸ್ಲಿಂ ಸಮುದಾಯ ನಮಗೂ ಮೀಸಲಾತಿ ಕೊಡಿ ಅಂತ ದೇವೇಗೌಡರಲ್ಲಿ ಮನವಿ ಮಾಡ್ತು. ದೇವೇಗೌಡರು ನಮ್ಮ ಸಮುದಾಯಕ್ಕೆ 4% ಮೀಸಲಾತಿ ನೀಡಿದ್ರು. ಆದ್ರೆ ಬೊಮ್ಮಣ್ಣ ಮೀಸಲಾತಿಯನ್ನೇ ತೆಗೆದ. ಬೊಮ್ಮಣ್ಣ ನಿಮ್ಮಪ್ಪ ನಮ್ ಜೊತೆಲ್ಲಿದ್ರಣ್ಣ. ಜಾತಿ ಜಾತಿಗಳ ನಡುವೆ ಯಾಕೆ ತಂದಿಡೋ ಕೆಲಸ ಮಾಡ್ತೀಯಾ ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರ ಶಕ್ತಿ ನಮ್ಮ ಜೊತೆ ಇದೆ. ಇಡೀ ಮುಸ್ಲಿಂ ಸಮುದಾಯ ದೇವೇಗೌಡರನ್ನ ಸ್ಮರಿಸಿಕೊಳ್ತಿದೆ. ನೀತಿ ಸಂಹಿತೆ ಬರಲಿದೆ, ನಿಮ್ಮ ಪ್ಲಾನ್ ತಲೆಕೆಳಕಾಗಲಿದೆ. ನಾಳೆ ಬೆಂಗಳೂರಿನಲ್ಲಿ ಮುಸ್ಲಿಮರು ಪ್ರತಿಭಟನೆ ಮಾಡ್ತಿದ್ದೇವೆ ಎಂದು ಅವರು ಹೇಳಿದ್ದಾರೆ.