ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಭರದಿಂದ ಸಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಸಿಎಂ ಬೊಮ್ಮಾಯಿ 94 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಂದಿಹಿಲ್ಸ್ ರೋಪ್ ವೇ ಗೆ ಶಂಕು ಸ್ಥಾಪನೆ ಮಾಡಿದ್ದಾರೆ.
ಇದರ ಜೊತೆಗೆ 800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡವನ್ನು ಕೂಡಾ ಉದ್ಘಾಟಿಸಿದ್ದಾರೆ. ಬಳಿಕ ಚಿಕ್ಕಬಳ್ಳಾಪುರ ತಾಲೂಕಿನ ಸೋಲಾಲಪ್ಪನ ದಿನ್ನೆಯಲ್ಲಿ ಅವಳಿ ಜಿಲ್ಲೆಗಳ ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ.
ನನಸಾಗುವತ್ತ ಶಂಕರ್ ನಾಗ್ ಕನಸು
ಮೆಟ್ರೋ ಸೇರಿದಂತೆ ಹಲವು ಕನಸುಗಳನ್ನು ಆ ಕಾಲದಲ್ಲೇ ಕಂಡಿದ್ದ ದಿವಂಗತ ನಟ ಶಂಕರ್ ನಾಗ್ ಅಂದೇ ನಂದಿ ಗಿರಿಧಾಮಕ್ಕೆ ರೋಪ್ ವೇ ಕನಸನ್ನು ಕಂಡಿದ್ದರು. ಅದೀಗ ನನಸು ಆಗುವತ್ತ ಸಾಗಿದೆ.
ಇನ್ನು 800 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಆಗುತ್ತಿರುವ ಸರ್ಕಾರಿ ಮೆಡಿಕಲ್ ಕಾಲೇಜು ಕ್ರೆಡಿಟ್ ವಾರ್ ಡಿಕೆಶಿ ಹಾಗೂ ಸುಧಾಕರ್ ನಡುವೆ ನಡೆಯುತ್ತಿದ್ದು, ಈ ಕಟ್ಟಡವನ್ನು ಸಿಎಂ ಬೊಮ್ಮಾಯಿಯವರು ಉದ್ಘಾಟನೆ ಮಾಡಿದ್ದಾರೆ.