ಮೌರ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ರೇಸ್‍ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮರಣಾರ್ಥ ಡಾ.ಎಚ್.ಎಂ ಅಂಬರೀಶ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಸೋಮವಾರ ಸಂಜೆ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
ಸಂಸದೆ ಸುಮಲತಾ ಅಂಬರೀಶ್, ಶಾಸಕ ರಿಜ್ವಾನ್ ಅರ್ಷದ್, ಸಚಿವ ಸುಧಾಕರ್ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸುರಕ್ಷ 75 ಮಿಷನ್ 2023 – ಕಾಫಿಟೇಬಲ್ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಯಿತು.
ನಗರದ ಪ್ರಮುಖ 75 ಜಂಕ್ಷನ್‍ಗಳನ್ನು ಪಾದಚಾರಿಗಳು ಮತ್ತು ಸೈಕ್ಲಿಸ್ಟ್‍ಗಳಿಗೆ ಅನುಕೂಲವಾಗುವಂತೆ ಮರುವಿನ್ಯಾಸ ಮಾಡಲಾಗುತ್ತಿದ್ದು, ಅಪಘಾತ ತಡೆಯುವ ದೃಷ್ಟಿಯಿಂದ ಸುರಕ್ಷ 75 ಮಿಷನ್ 2023 ಯೋಜನೆ ಇಂದಿನಿಂದ ಜಾರಿಯಾಗಲಿದೆ. ಕಳೆದ ನಾಲ್ಕುವರ್ಷಗಳಿಂದ ಬೆಂಗಳೂರಿನಲ್ಲಿ ನಡೆದ ಅಪಘಾತಗಳ ಮಾಹಿತಿಯ ಆಧಾರದ ಮೇಲೆ ಈ 75 ಜಂಕ್ಷನ್‍ಗಳನ್ನು ಗುರುತಿಸಲಾಗಿದ್ದು, ಬಿಬಿಎಂಪಿಯ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.