ಬ್ರೆಜಿಲ್‌ನಲ್ಲಿ ಇದೇ ನವೆಂಬರ್‌ಗೆ ನಿಗದಿಯಾಗಿರುವ ಪರಿಸರ ಸಮ್ಮೇಳನಕ್ಕಾಗಿ ರಸ್ತೆ ನಿರ್ಮಿಸಲು ಅಲ್ಲಿನ ಸರ್ಕಾರವು ಅಮೆಜಾನ್ ಮಳೆಕಾಡಿನಲ್ಲಿ ಸಾವಿರಾರು ಮರಗಳನ್ನು ಕಡಿದು ಹಾಕಲು ಆದೇಶಿಸಿದ್ದು, ಈಗಾಗಲೇ 13 ಕಿಮೀ ನಷ್ಟು ದಟ್ಟಾರಣ್ಯವನ್ನು ನಾಶ ಮಾಡಿದೆ.
ಬ್ರೆಜಿಲ್‌ನ ಈಶಾನ್ಯ ಭಾಗದಲ್ಲಿನ ಬೆಲೆಂ ನಗರದಲ್ಲಿ ಹವಾಮಾನ ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಈ ಬೃಹತ್ ಸಮ್ಮೇಳನಕ್ಕೆ ವಿದೇಶಿ ಗಣ್ಯರು ಸೇರಿ 50,000 ಅತಿಥಿಗಳು ಆಗಮಿಸಲಿದ್ದಾರೆ. ಹೀಗಾಗಿ ನಗರದಲ್ಲಿ ವಾಹನ ದಟ್ಟಣೆ ಉಂಟಾಗಬಾರದು ಎಂಬ ಕಾರಣಕ್ಕೆ ಚತುಷ್ಪತ ಹೆದ್ದಾರಿ ನಿರ್ಮಿಸಲು ಸರ್ಕಾರ ಮುಂದಾಗಿದೆ.
ಈಗಾಗಲೇ ಅಲ್ಲಿನ ಜನ ತಮ್ಮ ವ್ಯವಸಾಯಕ್ಕೆ ನೂರಾರು ಎಕರೆ ಅರಣ್ಯವನ್ನು ನಾಶ ಮಾಡಿದ್ದು, ಇದರಿಂದ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಇದರಿಂದ ನದಿಗಳು ಕೂಡ ಬತ್ತುತ್ತಿವೆ. ಇದರ ನಡುವೆಯೇ ಅರಣ್ಯ ನಾಶಕ್ಕೆ ಸರ್ಕಾರ ಮುಂದಾಗಿದ್ದು, ಪರಿಸರವಾದಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮೆಜಾನ್ ಕಾಡು ಇಡೀ ಪ್ರಪಂಚದಲ್ಲೇ ಅತಿ ಸೂಕ್ಷ್ಮ ಜೀವಿಗಳು ಇಲ್ಲಿ ಕಾಣಿಸುತ್ತಿದ್ದು, ನಿರಂತರ ಕಾಡು ನಾಶದಿಂದಾಗಿ ಅಳಿದು ಹೋಗುತ್ತಿದೆ. ಅಷ್ಟೇ ಅಲ್ಲದೆ ಅಮೆಜಾನ್ ಅತಿ ಹೆಚ್ಚು ಕಾರ್ಬನ್ ಗುಣವನ್ನು ಸೆಳೆದುಕೊಳ್ಳುತ್ತಿದ್ದು, ಅತಿ ಹೆಚ್ಚಾಗಿ ಮಳೆ ಬರುತ್ತದೆ.
I shit you not, a new four-lane highway is being built that cuts through tens of thousands of acres of protected Amazon rainforest for the COP30 climate summit in the Brazilian city of Belém. pic.twitter.com/GTmyeONbsz
— Champagne Joshi (@JoshWalkos) March 12, 2025
ಆದರೆ ಈ ರೀತಿ ಕಾಡುಗಳನ್ನು ನಾಶ ಮಾಡುವುದರಿಂದ ಮಳೆಯ ಪ್ರಮಾಣ ಕೂಡ ಕಡಿಮೆಯಾಗುತ್ತದೆ, ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಈಗಾಗಲೇ ಅಮೆಜಾನ್ ಕಾಡು ಹೊಂದಿರುವ ಬ್ರೆಜಿಲ್ ದೇಶ ಕಂಡು ಕೇಳರಿಯದ ಭೀಕರ ಬರಗಾಲಕ್ಕೆ ತುತ್ತಾಗಿದೆ. ನದಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಜನರ ಜೀವನ ಬೀದಿಗೆ ಬಂದಿದೆ.
ಈ ಹಿಂದೆ 2004ರಲ್ಲಿ 1.98 ಮಿಲಿಯನ್ ಹೆಕ್ಟೇರ್ನಷ್ಟು ಕಾಡು ನಾಶ ಮಾಡಲಾಗಿತ್ತು. ಆನಂತರ 2021ರ ಆಗಸ್ಟ್‌ನಿಂದ 2022ರ ಜುಲೈವರೆಗೆ ಹೆಚ್ಚು ಅರಣ್ಯ ನಾಶವಾಗಿತ್ತು. ಈ ಅವಧಿಯಲ್ಲಿ ಒಟ್ಟು 11,568 ಚದರ ಕಿಲೋ ಮೀಟರ್, 2023ರಲ್ಲಿ 9,117 ಚ.ಕಿ.ಮೀ.ನಷ್ಟು ಕಾಡನ್ನು ನಾಶ ಮಾಡಲಾಗಿದೆ ಎಂದ ಬ್ರೆಜಿಲ್ ಸರ್ಕಾರವೇ ಮಾಹಿತಿ ನೀಡಿತ್ತು.