Sunday, November 3, 2024
Homeರಾಜ್ಯಬಿಜೆಪಿ, ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ: 3 ಬೆರಳು ಕಟ್

ಬಿಜೆಪಿ, ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ: 3 ಬೆರಳು ಕಟ್

ರಾಯಚೂರು: ತಮ್ಮ ತಮ್ಮ ರಾಜಕೀಯ ನಾಯಕರ ಪರ ಚರ್ಚೆ ಮಾಡುತ್ತಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರಿಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಓರ್ವನ ಮೂರು ಬೆರಳು ಕತ್ತರಿಸಿದೆ.

ರಾಯಚೂರಿನ ಅಂದ್ರೂನ್ ಖಿಲ್ಲಾ‌ ನಗರದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಆರಿಫ್ ಹಾಗೂ ಮೊಹಮ್ಮದ್ ವಾಸಿಮ್ ಎಂದು ಗುರುತಿಸಲಾಗಿದೆ. ಆರಿಫ್​ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿಗರಾಗಿದ್ದು, ಮೊಹಮ್ಮದ್ ವಾಸಿಮ್ ಕಾಂಗ್ರೆಸ್ ಕೌನ್ಸಿಲರ್​ ತಿಮ್ಮಾ ರೆಡ್ಡಿ ಆಪ್ತರಾಗಿದ್ದಾರೆ. ಭಾನುವಾರ ತಡರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪಕ್ಷಗಳ ಕುರಿತು ವೈರಲ್ ಆದ ಸುದ್ದಿ ಬಗ್ಗೆ ಚರ್ಚೆಗೆ ಇಳಿದಿದ್ದಾರೆ. ಪರ ವಿರೋಧ ಹೇಳಿಕೆಗಳಿಂದ ಕೋಪಿತರಾಗಿದ್ದಾರೆ. ಗಲಾಟೆ ತೀರ್ವ ಸ್ವರೂಪ ಪಡೆದಿದ್ದು, ಪರಸ್ಪರ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.

ಇದರಿಂದ ಆರಿಫ್​ನ ಮೂರು ಬೆರಳುಗಳು ತುಂಡಾಗಿವೆ. ಇನ್ನು ಮೊಹಮ್ಮದ್ ವಾಸಿಮ್​ಗೂ ಗಾಯಗಳಾಗಿದ್ದು, ಇಬ್ಬರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಹೆಚ್ಚಿನ ಸುದ್ದಿ

error: Content is protected !!