Saturday, April 26, 2025
Homeಕ್ರೈಂSHOCKING : ವಿಚಾರಣೆ ವೇಳೆ ಸಿಗರೇಟ್ ಸೇದಿದ ದಾವೆದಾರ - ಕೋರ್ಟ್ ನಿಂದ ಸಮನ್ಸ್ ಜಾರಿ  

SHOCKING : ವಿಚಾರಣೆ ವೇಳೆ ಸಿಗರೇಟ್ ಸೇದಿದ ದಾವೆದಾರ – ಕೋರ್ಟ್ ನಿಂದ ಸಮನ್ಸ್ ಜಾರಿ  

ನವದೆಹಲಿ : ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯ ವೇಳೆ ದಾವೆದಾರನೊಬ್ಬ ಸಿಗರೇಟ್ ಸೇದಿ ಸಿಕ್ಕಿ ಬಿದ್ದಿದ್ದು, ಇದೀಗ ನ್ಯಾಯಾಲಯವು ವ್ಯಕ್ತಿಗೆ ಸಮನ್ಸ್ ಜಾರಿ ಮಾಡಿದೆ.

ಮಾರ್ಚ್ 25 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿರುವ ವೇಳೆ ದಾವೆದಾರ ಸುಶೀಲ್ ಕುಮಾರ್ ಎಂಬುವವರು ರಾಜರೋಷವಾಗಿ ಸಿಗರೇಟ್ ಸೇದಿದ್ದಾರೆ. ಈ ವೇಳೆ ನ್ಯಾಯಾಧೀಶರು ಇದನ್ನು ಗಮನಿಸಿ ಪ್ರಶ್ನಿಸಿದ್ದಾರೆ.

ಸುಶೀಲ್ ಅವರ ಈ ದುಷ್ಕೃತ್ಯದ ಬಗ್ಗೆ ಕೆಲ ಕಾಲ ಚರ್ಚೆಯಾಗಿದ್ದು, ಇದೀಗ ದೆಹಲಿ ನ್ಯಾಯಾಲಯವು ಸುಶೀಲ್ ಕುಮಾರ್ ಗೆ ಸಮನ್ಸ್ ಜಾರಿ ಮಾಡಿದ್ದು, ಇದೇ ತಿಂಗಳು 29 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ತಪ್ಪಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆದೇಶಿಸಿದೆ.

ವರದಿಯ ಪ್ರಕಾರ, ಈ ಹಿಂದೆ ವಿಚಾರಣೆಯ ವೇಳೆ ಫೋನ್ ನಲ್ಲಿ ಮಾತಾನಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದರು, ಆಗ ನ್ಯಾಯಾಲಯಕ್ಕೆ ಕ್ಷಮೆ ಕೇಳಿ ಇನ್ನುಮುಂದೆ ಈ ರೀತಿ ಮಾಡುವುದಿಲ್ಲ ಎಂದು ಕೇಳಿಕೊಂಡಿದ್ದರು, ಇದೀಗ ಕಾನ್ಫರೆನ್ಸ್ ನಲ್ಲಿ ಬಹಿರಂಗವಾಗಿ ಸಿಗರೇಟ್ ಸೇದಿದ್ದು, ಇದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸುದ್ದಿ

error: Content is protected !!