Wednesday, December 4, 2024
Homeಟಾಪ್ ನ್ಯೂಸ್By Election : ಸ್ಥಳೀಯ ಸಂಸ್ಥೆಗಳಿಗೆ ಉಪಚುನಾವಣೆ, ಅಧಿಸೂಚನೆ ಪ್ರಕಟ

By Election : ಸ್ಥಳೀಯ ಸಂಸ್ಥೆಗಳಿಗೆ ಉಪಚುನಾವಣೆ, ಅಧಿಸೂಚನೆ ಪ್ರಕಟ

ಚಿತ್ರದುರ್ಗ : ವಿವಿಧ ಕಾರಣಗಳಿಂದ ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಸಭೆ ಮತ್ತು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಇದೇ ನ.23ರಂದು ಮತದಾನ ನಡೆಯಲಿದೆ. ಈ ಉಪಚುನಾವಣೆ ಸಂಬಂಧ ಅಧಿಸೂಚನೆ ಪ್ರಕಟವಾಗಿದೆ. ನ.11ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ಅವಕಾಶವಿದ್ದು, ನ.12ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ಇನ್ನು ನ.14 ನಾಮಿನೇಷನ್ ವಾಪಸ್ ಪಡೆಯಲು ಕೊನೆ ದಿನ. ನ.23ರಂದು ಬೆ. 7 ರಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಯಲಿದೆ. ಇಂದಿನಿಂದ (ನ.4) ನ.26 ರವರೆಗೆ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಡಿಸಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ನಗರಸಭೆಯ 15ನೇ ವಾರ್ಡ್-ಹಿಂದುಳಿದ ವರ್ಗ-(A), ಚಳ್ಳಕೆರೆ ನಗರಸಭೆಯ 4ನೇ ವಾರ್ಡ್-ಸಾಮಾನ್ಯ ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಜಾಗನೂರುಹಟ್ಟಿಯ 1ನೇ ವಾರ್ಡ್-SCಗೆ ಮೀಸಲಾತಿ ನಿಗಧಿಪಡಿಸಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!