Saturday, May 16, 2026
Homeಟಾಪ್ ನ್ಯೂಸ್VIRAL : ಮೃತ ವ್ಯಕ್ತಿಯೊಂದಿಗೆ ಐಷಾರಾಮಿ ಕಾರು ಹೂತಾಕಿ ಅಂತ್ಯಸಂಸ್ಕಾರ - ನೆಟ್ಟಿಗರಿಂದ ವ್ಯಾಪಕ ಟೀಕೆ...

VIRAL : ಮೃತ ವ್ಯಕ್ತಿಯೊಂದಿಗೆ ಐಷಾರಾಮಿ ಕಾರು ಹೂತಾಕಿ ಅಂತ್ಯಸಂಸ್ಕಾರ – ನೆಟ್ಟಿಗರಿಂದ ವ್ಯಾಪಕ ಟೀಕೆ : VIDEO

ಚೀನಾ: ಇಲ್ಲಿನ (China) ಲಿಯಾನಿಂಗ್ (Liaoning) ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗೆ ನಿಧನರಾದಾಗ, ಅವರ ಕುಟುಂಬಸ್ಥರು ಮೃತರ ಮೇಲಿನ ಪ್ರೀತಿಗಾಗಿ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಕಪ್ಪು ಬಣ್ಣದ ‘ಮರ್ಸಿಡಿಸ್ ಬೆಂಜ್ S450L’ ಕಾರನ್ನೇ (Luxury car) ಅವರ ಸಮಾಧಿಯೊಳಗೆ ಹೂತುಹಾಕಿದ್ದಾರೆ. ಮೃತ ವ್ಯಕ್ತಿಗೆ ಐಷಾರಾಮಿ ಕಾರುಗಳೆಂದರೆ ಪಂಚಪ್ರಾಣವಾಗಿತ್ತು ಎನ್ನಲಾಗಿದೆ. ಸಮಾಧಿಯ ಬಳಿ ಜೆಸಿಬಿ ಮೂಲಕ ಕಾರನ್ನು ಹೂಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ : ಮನುಷ್ಯರಂತೆ ಗಿಳಿಗಳೂ ಹೆಸರನ್ನು ಬಳಸುತ್ತವೆ- ಸಂಶೋಧನೆಯಲ್ಲಿ ಕುತೂಹಲಕಾರಿ ಸತ್ಯ ಬಯಲು!

ಈ ವಿಲಕ್ಷಣ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾರಿನ ಎಂಜಿನ್ ಮತ್ತು ಬ್ಯಾಟರಿಯಲ್ಲಿರುವ ರಾಸಾಯನಿಕಗಳು ಮಣ್ಣು ಮತ್ತು ಅಂತರ್ಜಲವನ್ನು ಕಲುಷಿತಗೊಳಿಸುತ್ತವೆ ಎಂಬ ಆತಂಕ ಪರಿಸರವಾದಿಗಳಲ್ಲಿ ಮೂಡಿದೆ. ಅಲ್ಲದೆ, ಇದು ಕೇವಲ ಶ್ರೀಮಂತಿಕೆಯ ಪ್ರದರ್ಶನ ಎಂದು ಅನೇಕರು ಟೀಕಿಸಿದ್ದಾರೆ.

ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆಗಿಳಿದ ಚೀನಾದ ನಾಗರಿಕ ವ್ಯವಹಾರಗಳ ಇಲಾಖೆ, ಇದೊಂದು “ಮೂಢನಂಬಿಕೆಯ ಪರಮಾವಧಿ” ಎಂದು ಖಂಡಿಸಿದೆ. ಕಾನೂನು ಬಾಹಿರವಾಗಿ ಕಾರನ್ನು ಹೂತುಹಾಕಿದ್ದಕ್ಕಾಗಿ ಕುಟುಂಬಕ್ಕೆ ಭಾರಿ ದಂಡ ವಿಧಿಸಲಾಗಿದ್ದು, ಕಾರನ್ನು ಮತ್ತೆ ಹೊರತೆಗೆಯಲು ತಗುಲುವ ವೆಚ್ಚವನ್ನೂ ಅವರೇ ಭರಿಸಬೇಕೆಂದು ಅಧಿಕಾರಿಗಳು ಆದೇಶಿಸಿದ್ದಾರೆ. ಇದರೊಂದಿಗೆ, ಪರಿಸರಕ್ಕೆ ಹಾನಿ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆಯೂ ಸೂಚಿಸಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!