Monday, June 15, 2026
Homeಟಾಪ್ ನ್ಯೂಸ್CHINA-AMERICA : ಮುಂದಿನ ಐದು ವರ್ಷಗಳಲ್ಲಿ ಚೀನಾ ತೈವಾನ್ ಆಕ್ರಮಿಸುವುದು ಬಹುತೇಕ ಖಚಿತ?

CHINA-AMERICA : ಮುಂದಿನ ಐದು ವರ್ಷಗಳಲ್ಲಿ ಚೀನಾ ತೈವಾನ್ ಆಕ್ರಮಿಸುವುದು ಬಹುತೇಕ ಖಚಿತ?

ಅಮೆರಿಕ: ಚೀನಾ‌ಗೆ (China) ಇತ್ತೀಚೆಗೆ ಡೊನಾಲ್ಡ್ ಟ್ರಂಪ್ (Donald trump) ಭೇಟಿ ನೀಡಿದ ಬೆನ್ನಲ್ಲೇ, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಚೀನಾ ತೈವಾನ್ (Taiwan) ಮೇಲೆ ಸೇನಾ ದಾಳಿ ನಡೆಸುವ ಅಥವಾ ಅದನ್ನು ತನ್ನ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಶ್ವೇತಭವನದ (Whitehouse) ಆಪ್ತ ಮೂಲಗಳು ಎಚ್ಚರಿಸಿವೆ. ಜಿನ್‌ಪಿಂಗ್ ಈಗ ತಮ್ಮ ದೇಶವನ್ನು ಅಮೆರಿಕಕ್ಕೆ ಸರಿಸಮಾನವಾದ ಶಕ್ತಿಯೆಂದು ಬಿಂಬಿಸುತ್ತಿದ್ದು, ತೈವಾನ್ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂಬುದು ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೈವಾನ್‌ಗೆ ನೀಡಬೇಕಿದ್ದ ಶಸ್ತ್ರಾಸ್ತ್ರ ನೆರವನ್ನು ಚೀನಾದೊಂದಿಗಿನ ಮಾತುಕತೆಗೆ ಒಂದು ‘ದಾಳ’ವನ್ನಾಗಿ ಬಳಸಿಕೊಳ್ಳುತ್ತಿರುವುದು ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಈ ರಾಜತಾಂತ್ರಿಕ ಜೂಜಾಟ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಅಸ್ಥಿರತೆ ತರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಇದನ್ನೂ ಓದಿ : ​ಒಂದೇ ಒಂದು ಚೈನಾ ಮಾಲ್ ಇಟ್ಟುಕೊಳ್ಳದೇ ಕಸದ ಬುಟ್ಟಿಗೆ ಎಸೆದ ಟ್ರಂಪಣ್ಣ..? ಕಾರಣ?

ವಿಶ್ವದ ಅತ್ಯಾಧುನಿಕ ಸೆಮಿಕಂಡಕ್ಟರ್ ಅಥವಾ ಮೈಕ್ರೋಚಿಪ್‌ಗಳ ಉತ್ಪಾದನೆಯಲ್ಲಿ ತೈವಾನ್ ಏಕಸ್ವಾಮ್ಯ ಹೊಂದಿದೆ. ಒಂದು ವೇಳೆ ಚೀನಾವು ತೈವಾನ್ ಮೇಲೆ ನಿಯಂತ್ರಣ ಸಾಧಿಸಿದರೆ, ಅಮೆರಿಕದ ತಂತ್ರಜ್ಞಾನ ಕ್ಷೇತ್ರ ಮತ್ತು ಎಐ (AI) ಉದ್ಯಮಕ್ಕೆ ಅಗತ್ಯವಿರುವ ಚಿಪ್‌ಗಳ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಬಹುದು. ಪ್ರಸ್ತುತ ಅಮೆರಿಕವು ಈ ಚಿಪ್‌ಗಳ ತಯಾರಿಕೆಯಲ್ಲಿ ಸ್ವಾವಲಂಬಿಯಾಗಿಲ್ಲದ ಕಾರಣ, ಈ ಬಿಕ್ಕಟ್ಟು ಸಂಭವಿಸಿದರೆ ಇಡೀ ಜಾಗತಿಕ ಆರ್ಥಿಕತೆಯೇ ಕುಸಿಯುವ ಭೀತಿ ಎದುರಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!