ಮಧ್ಯಪ್ರದೇಶ: ನಮೀಬಿಯಾದಿಂದ ಕರೆತಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಇತ್ತೀಚೆಗೆ ಬಿಡಲಾಗಿದ್ದ ಒಬಾನ್ ಎನ್ನುವ ಚಿರತೆ ಮಧ್ಯಪ್ರದೇಶದ ಗ್ರಾಮವೊಂದಕ್ಕೆ ನುಗ್ಗಿದ್ದು, ಆತಂಕ ಸೃಷ್ಟಿಸಿತ್ತು. ಜಾರ್ ಬರೋಡಾ ಗ್ರಾಮವು ಕುನೋ ರಾಷ್ಟ್ರೀಯ ಉದ್ಯಾನದಿಂದ 20 ಕಿಲೋಮೀಟರ್ ದೂರದಲ್ಲಿದೆ.
ಚಿರತೆ ಗ್ರಾಮಕ್ಕೆ ನುಗ್ಗಿರುವುದನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದಾರೆ. ರಕ್ಷಣೆಗಾಗಿ ಕೋಲುಗಳನ್ನು ಹಿಡಿದುಕೊಂಡಿದ್ದಾರೆ. ಮಾಹಿತಿ ತಿಳಿದು ಸಂಬಂಧಪಟ್ಟ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು.
ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ರಾಷ್ಟ್ರೀಯ ಉದ್ಯಾನದಿಂದ ಚೀತಾ ಗ್ರಾಮಕ್ಕೆ ನುಗ್ಗಿದೆ ಎನ್ನುವ ಮಾಹಿತಿ ಕೇಳಿ ಅರಣ್ಯ ಇಲಾಖೆ ಅಧಿಕಾರಿಗಳೂ ಆಶ್ಚರ್ಯಕ್ಕೊಳಗಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಚೀತಾದ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅದನ್ನು ಸೆರೆಹಿಡಿದು ಸುರಕ್ಷಿತವಾಗಿ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲು ಎಲ್ಲ ತಯಾರಿಗಳನ್ನು ನಡೆಸಲಾಗಿದೆ.