ಬೆಂಗಳೂರು: ಸಿನಿಮಾದಲ್ಲಿ ಲೀಡ್ ರೋಲ್ ಕೊಡಿಸುವುದಾಗಿ ಆಸಕ್ತ ಕಲಾವರಿದರು ಮತ್ತು ತರುಣ, ತರುಣಿಯರಿಗೆ ಆಮಿಷ ತೋರಿಸಿ ಅವರಿಂದ ಹಣ ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಈತನಿಂದ ವಂಚನೆಗೊಳಗಾದ ಸುಮಾರು 60 ಮಂದಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಯುವಕರ ದೂರನ್ನಾಧರಿಸಿ ಪೊಲೀಸರು ಧನುಷ್ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಧನುಷ್ ಆಕ್ಟಿಂಗ್ ಸ್ಕೂಲ್ ಒಂದರಲ್ಲಿ ನಟನೆ ಮತ್ತು ನೃತ್ಯ ಹೇಳಿಕೊಡುವ ಕೆಲಸ ಮಾಡುತ್ತಿದ್ದ. ಈ ಶಾಲೆಗೆ ಬರುತ್ತಿದ್ದ ನಟನೆಯಲ್ಲಿ ಆಸಕ್ತಿ ಉಳ್ಳ ತರುಣರಿಗೆ ಸಿನಿಮಾದಲ್ಲಿ ಲೀಡ್ ರೋಲ್ ಚಾನ್ಸ್ ಕೊಡಿಸುವುದಾಗಿ ಪುಸಲಾಯಿಸುತ್ತಿದ್ದ ಧನುಷ್, ಅವರಿಂದ 20- 50 ಸಾವಿರ ರೂ. ಹಣ ಪಡೆಯುತ್ತಿದ್ದ. ಈತನ ವಂಚನೆ ತಿಳಿದ ಸಂತ್ರಸ್ತರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ.