ಚನ್ನಪಟ್ಟಣ : ಬೇರೆಯವರು ಇಲ್ಲಿ ನೆಂಟರಂತೆ ಬರುತ್ತಾರೆ, ಬಂದ ನಂತರ ಅನುಕೂಲ ಮಾಡಿಕೊಂಡು ಹೋಗುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದ ಕೋಡಂಬಳ್ಳಿ, ಕೊಂಡಾಪುರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದ ಅವರು, ತಾಲೂಕಿನ ರೈತರು ಯುವಕರು, ಮಹಿಳೆಯರು ಕುಮಾರಸ್ವಾಮಿ ಅವರಿಗೆ ಮತ ನೀಡಿದ್ದರು. ಅವರು ನಂಬಿಕೆ ಉಳಿಸಿಕೊಳ್ಳಲಿಲ್ಲ. ಕುಮಾರಸ್ವಾಮಿಯವರು ನಿಮ್ಮ ಕಷ್ಟ ಕೇಳಲು ಬರಲಿಲ್ಲ. ಕಳೆದ ವರ್ಷ ಕೆರೆ ತುಂಬಿಸಲಿಲ್ಲ ಎಂದು ಕುಟುಕಿದರು.
ನಿಮ್ಮ ಊರಿನ ಯೋಗೇಶ್ವರ್ ಅವರಿಗೆ ಮತ ನೀಡಿ ಗೆಲ್ಲಿಸುವ ಅವಕಾಶ ಸಿಕ್ಕಿದೆ. ಇದೇ ತಾಲೂಕಿನಲ್ಲಿ ಹುಟ್ಟಿದ್ದಾರೆ, ಬೆಳೆದಿದ್ದಾರೆ ಚುನಾವಣೆಯಲ್ಲಿ ಸೋತಿದ್ದಾರೆ. ಬೇರೆಯವರು ನೆಂಟರಂತೆ ಬರುತ್ತಾರೆ ಲಾಭ ಪಡೆದು ಹೋಗುತ್ತಾರೆ ಎಂದು ತಿವಿದರು. ಕ್ಷೇತ್ರದಲ್ಲಿ ಕೆಲಸ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕೈಯನ್ನು ಬಲಪಡಿಸಲು ನ.13ರಂದು ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.