ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿರುವ ರಸ್ತೆಗಳ ಪಟ್ಟಿ ಹೀಗಿದೆ.
ಹೂಡಿ- ವರ್ತೂರು ರಸ್ತೆ, ವರ್ತೂರು ಕೋಡಿಯಿಂದ – ಸತ್ಯ ಸಾಯಿ ಆಶ್ರಮಕ್ಕೆ ಸಾಗುವ ರಸ್ತೆ, ಗ್ರಾಫೈಟ್ ಇಂಡಿಯಾದಿಂದ ವೈದೇಹಿ ಆಸ್ಪತ್ರೆಗೆ ಸಾಗುವ ರಸ್ತೆ, ವೈದೇಹಿ ಆಸ್ಪತ್ರೆಯಿಂದ ಬಿಗ್‍ಬಜಾರ್ ಜಂಕ್ಷನ್ ಡಿ ಕಡೆಗೆ ಸಾಗುವ ರಸ್ತೆ ಹಾಗೂ ಹೋಪ್ ಫಾರಂನಿಂದ ಚನ್ನಸಂದ್ರ ಕಡೆಗೆ ಹೋಗುವ ರಸ್ತೆಯಲ್ಲಿ ಮಧ್ಯಾಹ್ನ 12 ರಿಂದ 2.30 ರವರೆಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ನಿರ್ಬಂಧ ವಿಧಿಸಿರುವ ರಸ್ತಗಳಿಗೆ ಪರ್ಯಾಯ ಮಾರ್ಗವನ್ನೂ ಸಹ ಕಲ್ಪಿಸಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಿಕೊಳ್ಳಲು ಸೂಚಿಸಲಾಗಿದೆ.
ಜೊತೆಗೆ ಭಾರೀ ಗಾತ್ರದ ವಾಹನಗಳಿಗೂ ಕೆಲವೆಡೆ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಕಾಟಂನಲ್ಲೂರು ಕ್ರಾಸ್ – ಕಾಡುಗೋಡಿ- ಹೋಪ್ ಫಾರಂ ಸರ್ಕಲ್- ವರ್ತೂರುಕೋಡಿ ವರೆಗಿನ ರಸ್ತೆ, ಗುಂಜೂರು- ವರ್ತೂರು- ವೈಟ್‍ಫೀಲ್ಡ್- ಹೋಪ್ ಫಾರಂ ವೃತ್ತದವರೆಗಿನ ರಸ್ತೆ, ತಿರುಮಶೆಟ್ಟಿಹಳ್ಳಿ ಕ್ರಾಸ್- ಚನ್ನಸಂದ್ರ- ಹೋಪ್ ಫಾರಂ ರಸ್ತೆ ಮತ್ತು ಟಿನ್ ಫಾಕ್ಟರಿ-ಹೂಡಿ-ಐಟಿಪಿಎಲ್-ಹೋಪ್ ಫಾರಂ ವರೆಗಿನ ರಸ್ತೆಗಳಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೆ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.